BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

King Cobra Rescue ಬೆಳ್ತಂಗಡಿ ಮಿತ್ತಬಾಗಿಲು ಗ್ರಾಮದ ದಿನಸಿ ಅಂಗಡಿ ಸೇರಿದ್ದ ಬೃಹತ್ ಕಾಳಿಂಗ ಸರ್ಪ ಸೆರೆ..!


ಬೆಳ್ತಂಗಡಿ, ಆಗಸ್ಟ್ 20 :   ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ದಿನಸಿ ಅಂಗಡಿಯೊಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡು, ಕೆಲಕಾಲ ಆತಂಕ ಸೃಷ್ಟಿಸಿತ್ತು. ಮಧ್ಯಾಹ್ನದ ವೇಳೆ ಅಂಗಡಿಯೊಳಗೆ ನುಗ್ಗಿದ್ದ ಈ ಹಾವನ್ನು ಉರಗ ಪ್ರೇಮಿಯೊಬ್ಬರು ಅತ್ಯಂತ ಜತುರತೆಯಿಂದ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಎಂಬಲ್ಲಿ ಈ ಘಟನೆ ನಡೆದಿದ್ದು, ಆಗಸ್ಟ್ 19 ರಂದು ಮಧ್ಯಾಹ್ನದ ವೇಳೆ ಈ ಆತಂಕಕಾರಿ ಬೆಳವಣಿಗೆ ಸಂಭವಿಸಿದೆ.ಕಕ್ಕೆನೇಜಿ ವಾಸುದೇವ ರಾವ್ ಅವರ ದಿನಸಿ ಅಂಗಡಿಯೊಳಗೆ ಹಠಾತ್ತನೆ ಬೃಹತ್ ಗಾತ್ರದ ಕಾಳಿಂಗ ಸರ್ಪವು ಸೇರಿಕೊಂಡಿದೆ.ಅಂಗಡಿಯೊಳಗೆ ಆಶ್ರಯ ಪಡೆದಿದ್ದ ಈ ಕಾಳಿಂಗ ಸರ್ಪವು ಬರೋಬ್ಬರಿ 10 ಅಡಿಗೂ ಅಧಿಕ ಉದ್ದವಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಲಾಯಿಲದ ಉರಗ ಮಿತ್ರ 'ಸ್ನೆಕ್ ಅಶೋಕ್' ಅವರು ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ, 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆಹಿಡಿದರು.

Join whatsapp Group for Fast news..

https://chat.whatsapp.com/E9j38fGPpPy4Giss5koQpq

ಜನರ ಆತಂಕಕ್ಕೆ ಕಾರಣವಾಗಿದ್ದ ಈ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದ ಬಳಿಕ, ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಹಾವನ್ನು ರಕ್ಷಣೆ ಮಾಡುವ ಈ ರೋಮಾಂಚಕಾರಿ ಕಾರ್ಯಾಚರಣೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

https://youtube.com/shorts/mWpW4yGjAWk?feature=share



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!