BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kids police complaint ಚಾಕಲೇಟ್ ಕದ್ದ ತಾಯಿಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋದ 3 ವರ್ಷದ ಬಾಲಕ.!




ಬುರ್ಹಾನ್‌ಪುರ, ಆಗಸ್ಟ್ 14 :  ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ಗಂಭೀರ ದೂರುಗಳೊಂದಿಗೆ ಜನ ಹೋಗುವುದನ್ನು ನೀವು ನೋಡಿದ್ದೀರಿ. ಆದ್ರೆ, ಬರೀ ಮೂರು ವರ್ಷದ ಪುಟ್ಟ ಮಗುವೊಂದು, ತನ್ನ ಚಾಕಲೇಟ್ ಕದ್ದಿದ್ದಾಳೆ ಎಂದು ಸ್ವತಃ ತನ್ನ ತಾಯಿಯ ಮೇಲೆಯೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿರುವ ಅಚ್ಚರಿಯ ಹಾಗೂ ಮುದ್ದಾದ ಘಟನೆಯೊಂದು ವೈರಲ್ ಆಗಿದೆ..

ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 3 ವರ್ಷದ ಪುಟಾಣಿ ಹಮ್ಜಾ (Hamza), ತನ್ನ ಅಮ್ಮ ತನಗೆ ಬೈದು, ತಾನು ಇಟ್ಟುಕೊಂಡಿದ್ದ ಚಾಕಲೇಟ್‌ಗಳನ್ನು ಕದ್ದುಕೊಂಡಿದ್ದಾಳೆ ಎಂದು ಸಿಟ್ಟಿಗೆದ್ದಿದ್ದಾನೆ.

ಮನೆ ಮಾತುಕತೆಯಿಂದ ಸರಿಹೋಗದಿದ್ದಾಗ, ಪುಟಾಣಿ ಹಮ್ಜಾ ನೇರವಾಗಿ ತನ್ನ ತಂದೆಯ ಕೈ ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಹಠ ಹಿಡಿದಿದ್ದಾನೆ. ಕೊನೆಗೆ ತಂದೆ ಮಗುವನ್ನು ಡೆಡ್‌ತಲೈ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರ ಬಳಿ ಹೋದ ಮಗು, ಗಂಭೀರ ಮುಖ ಮಾಡಿಕೊಂಡು, "ಅಮ್ಮ ನನ್ನ ಚಾಕಲೇಟ್ ಕದ್ದಿದ್ದಾಳೆ, ಅವಳನ್ನು ಜೈಲಿಗೆ ಹಾಕಿ!" ಎಂದು ದೂರು ನೀಡಿದ್ದಾನೆ.

ಪೊಲೀಸ್ ಅಧಿಕಾರಿಗಳು ಮಗುವಿನ ಮುಗ್ಧ ಮಾತಿಗೆ ನಗುವುದನ್ನು ತಡೆದುಕೊಳ್ಳುತ್ತಲೇ, ಮಗುವಿನ ಸಂತೋಷಕ್ಕಾಗಿ ಒಂದು ನಕಲಿ ದೂರು ಅರ್ಜಿಯನ್ನೂ ಬರೆದು, ಗಂಭೀರವಾಗಿ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ!

ಸದ್ಯ ಈ ಮುದ್ದಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಮಗುವಿನ ಮುಗ್ಧತೆಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಈ ಪುಟ್ಟ ಬಾಲಕನ ಮುದ್ದಾದ ದೂರಿನ ವಿಡಿಯೋ ನೋಡಿ ಮನಸೋತ ಮಧ್ಯಪ್ರದೇಶದ ಗೃಹ ಸಚಿವರು, ಮಗುವಿಗೆ ಪ್ರೀತಿಯಿಂದ ಸೈಕಲ್ ಹಾಗೂ ಒಂದಿಷ್ಟು ಚಾಕಲೇಟ್‌ಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.

ಅಮ್ಮನ ವಿರುದ್ಧ ಮುನಿಸಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಪುಟಾಣಿ ಹಮ್ಜಾದ ಕಥೆ ಈಗ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ..

https://youtube.com/shorts/zOpaTX2lQbE?feature=share

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!