BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kerala Drug seized ಕೇರಳದ ಮುಥಂಗಾ ಚೆಕ್ ಪೋಸ್ಟ್ ಬಳಿ ಭರ್ಜರಿ ಕಾರ್ಯಾಚರಣೆ; 41.56 ಗ್ರಾಂ ಎಂಡಿಎಂಎ (MDMA) ವಶಕ್ಕೆ, ಇಬ್ಬರು ಅರೆಸ್ಟ್!


ಬತೇರಿ(ಕೇರಳ), ಆಗಸ್ಟ್ 12 : ಕೇರಳದಲ್ಲಿ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು, ಸುಲ್ತಾನ್ ಬತೇರಿಯ ಮುಥಂಗಾ ಪೊಲೀಸ್ ಚೆಕ್ ಪೋಸ್ಟ್ ಬಳಿ ಬೃಹತ್ ಪ್ರಮಾಣದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.ಕರ್ನಾಟಕದ ಕಡೆಯಿಂದ ಬರುತ್ತಿದ್ದ ಕೆಎಲ್ 10 ಬಿಬಿ 2213 (KL 10 BB 2213) ಸಂಖ್ಯೆಯ ಕಾರನ್ನು ತಡೆದು ಬತೇರಿ ಪೊಲೀಸರು ಮತ್ತು ಜಿಲ್ಲಾಖಾಸ್‌ ಆಂಟಿ-ನಾರ್ಕೋಟಿಕ್ಸ್ ಸ್ಕ್ವಾಡ್ ಜಂಟಿ ತಪಾಸಣೆ ನಡೆಸಿತು. ಈ ವೇಳೆ ಕಾರಿನಲ್ಲಿದ್ದವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಶೋಧ ನಡೆಸಿದಾಗ, ಆರೋಪಿ ಮುಹಮ್ಮದ್ ರಸೀಲ್‌ನ ಪ್ಯಾಂಟ್ ಪಾಕೆಟ್‌ನಲ್ಲಿ 41.56 ಗ್ರಾಂ ನಿಷೇಧಿತ ಎಂಡಿಎಂಎ ಪತ್ತೆಯಾಗಿದೆ.



ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ತೆತ್ತಮಲ್‌ನ ಮುಹಮ್ಮದ್ ರಸೀಲ್ (31) ಹಾಗೂ ಕೊಡಂಗಲ್ಲೂರು ಎರಿಯಾಡ್‌ನ ಸೆಟ್ಲಾನಾ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬತೇರಿ ಸಬ್‌ಇನ್ಸ್‌ಪೆಕ್ಟರ್ ಕೆ. ಶ್ರೀತು ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

https://youtube.com/shorts/m0ztSUrWYD4?feature=share






📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!