BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kerala dairies ರಸ್ತೆಯ ಮಧ್ಯೆ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕ : ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್..!


ಕೊಟ್ಟಾಯಂ, ಆಗಸ್ಟ್ 21 : ರಸ್ತೆಯ ಮಧ್ಯೆ ಕಾರನ್ನು ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕನೊಬ್ಬನಿಂದಾಗಿ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾದ ಅಪರೂಪದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಅತಿರಂಪುಳಾ ಸಮೀಪ ನಿಜವಾಗಿಯೂ ನಡೆದಿದೆ.

ವ್ಯಕ್ತಿಯೊಬ್ಬರು ಜನಸಂದಣಿ ಇರುವ ರಸ್ತೆಯ ಮಧ್ಯೆ ಕಾರನ್ನು ನಿಲ್ಲಿಸಿ, ಕಾರಿನ ಮ್ಯೂಸಿಕ್ ಅನ್ನು ಜೋರಾಗಿ ಹಾಕಿ ಸ್ಟೇರಿಂಗ್‌ನಲ್ಲೇ ಗಾಢ ನಿದ್ರೆಗೆ ಜಾರಿದ್ದರು. ಇದರಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಇತರ ವಾಹನಗಳು ಸಂಚರಿಸಲು ಸಾಧ್ಯವಾಗದೆ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಸಾರ್ವಜನಿಕರು ಎಷ್ಟೇ ಕಷ್ಟಪಟ್ಟು ಕೂಗಿಕೊಂಡರೂ ಚಾಲಕ ಎಚ್ಚರಗೊಳ್ಳಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಸ್ಥಳದಲ್ಲಿದ್ದ ಜನರು ಒಟ್ಟಾಗಿ ಕಾರನ್ನು ಅಲುಗಾಡಿಸಿ (Rocking the car) ಆತನನ್ನು ಗಾಢ ನಿದ್ರೆಯಿಂದ ಎಬ್ಬಿಸಿದ್ದಾರೆ.  ಪೊಲೀಸ್ ತನಿಖೆ ಹಾಗೂ ವರದಿಗಳ ಪ್ರಕಾರ ಆ ವ್ಯಕ್ತಿ ಅತಿಯಾಗಿ ಮದ್ಯ ಸೇವಿಸಿದ್ದ ಎಂಬುದು ದೃಢಪಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಸ್ಥಳೀಯ ಎಟ್ಟುಮನೂರು ಪೊಲೀಸರು ಚಾಲಕನನ್ನು ಪತ್ತೆ ಹಚ್ಚಿ, ನಿರ್ಲಕ್ಷ್ಯ ಹಾಗೂ ಮಧ್ಯ ಸೇವಿಸಿ ವಾಹನ ಚಾಯನೆ ಮಾಡಿದ ಅಪರಾಧದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://x.com/_whatsinthenews/status/2090649112257662995/video/1

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!