BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kerala accident ತ್ರಿಶೂರ್‌ ಬಳಿ ಖಾಸಗಿ ಬಸ್ ಭೀಕರ ಅಪಘಾತ, ಇಬ್ಬರು ಮಹಿಳೆಯರು ಮೃತ್ಯು, ಹಲವರು ಗಂಭೀರ ..!


ತ್ರಿಶೂರ್, ಆಗಸ್ಟ್ 07 : ಕೊಝಿಕೋಡಿನಿಂದ  ತ್ರಿಶೂರಿಗೆ ತೆರಳುತ್ತಿದ್ದ ಖಾಸಾಗಿ ಬಸ್ಸೊಂದು   ಅಪಘಾತಕ್ಕೀಡಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ18 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕನ ಅಜಾಗೃತೆ ಮತ್ತು ಅತಿ ವೇಗವೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಅತಿವೇಗವಾಗಿ ಬರುತ್ತಿದ್ದ ಈ ಬಸ್‌ ತ್ರಿಶೂರು ಜಿಲ್ಲೆಯ ಕುನ್ನಂಕುಳಂ  ಹತ್ತಿರದ ಪರಂಬಾಡಮ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ.   ಅತಿವೇಗದಲ್ಲಿದ್ದ ಬಸ್ ಮೊದಲು ಎದುರಿಂದ ಬಂದ ಕಾರಿಗೆ ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮುಂದುವರೆದು ಬಸ್ ಕಾರು, ವ್ಯಾನ್, ಬೈಕ್ ಆಟೋ ಸೇರಿದಂತೆ ಒಟ್ಟು ನಾಲ್ಕೈದು ವಾಹನಗಳನ್ನು ಜಜ್ಜಿಕೊಂಡು ಬಳಿಕ ರಸ್ತೆ ಪಕ್ಕದ ಮನೆಯೊಂದರ ಕಾಂಪೌಂಡ್ ಗೋಡೆಯನ್ನು ಸೀಳಿ  ಒಳ ನುಗ್ಗಿದೆ. ಈ ಸಂದರ್ಭ ಕಾರಿನಲ್ಲಿದ್ದ ರಿಯಾ ಫಾತಿಮಾ (17) ಮತ್ತು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ತಂಗಮಣಿ (72) ಎಂಬುವವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಪ್ರಮುಖ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!