BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Karwar Missing ಕಾರವಾರ ಪಿಯು ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿ ಒಂದೇ ದಿನ ಮಿಸ್ಸಿಂಗ್..!!


ಕಾರವಾರ, ಆಗಸ್ಟ್ 14 : ಕಾರವಾರದ ಕಾಲೇಜಿನಲ್ಲಿ ಓದುತ್ತಿದ್ದ ಹದಿಹರೆಯದ ವಿದ್ಯಾರ್ಥಿಗಳಿಬ್ಬರು ದಿಢೀರ್ ಆಗಿ ಕಾಣೆಯಾಗಿದ್ದಾರೆ. ಕಾಣೆಯಾಗಿದ್ದ ಈ ಇಬ್ಬರ ಹುಡುಕಾಟಕ್ಕೆ ಪಾಲಕರ ಶ್ರಮ ವ್ಯರ್ಥವಾದ ಬಳಿಕ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ಕಾರವಾರದ ನಂದನಗದ್ದಾ ಬಾಡದ ಪ್ರೀಮಿಯರ್ ಸೈನ್ಸ್ ಆಂಡ್ ಕಾಮರ್ಸ್ ಪಿ ಯು ಕಾಲೇಜಿನಲ್ಲಿ ಪೂನಮ್ ಜಿತೇಂದ್ರ ವೈಷ್ಣವ್ (16) ಹಾಗೂ ಸಾಗರ ಬಿಷನುಪದ ಪೋರಿಯಾ (17) ಅವರು ಕಲಿಯುತ್ತಿದ್ದರು. ಅವರಿಬ್ಬರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿದ್ದರು. ಜೂನ್ 24ರಂದು ಅವರಿಬ್ಬರು ಏಕಾಏಕಿ ಕಾಣೆಯಾಗಿದ್ದಾರೆ. ಆ ದಿನ ಕಾಲೇಜಿಗೆ ಬಂದಿದ್ದ ಅವರು ಮರಳಿ ಮನೆಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ಪಾಲಕರು  ಸಾಕಷ್ಟು ಹುಡುಕಾಟ ಮಾಡಿದ್ದರು. ಆದ್ರೂ ಎಲ್ಲಿಯೂ ಪತ್ತೆಯಾಗದ ಕಾರಣ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ. 

ಪೂನಮ್ ಜಿತೇಂದ್ರ ವೈಷ್ಣವ್ ಅವರು ಬಿಳಿ ಮೈಬಣ್ಣಹೊಂದಿದ್ದು ಸಾಧಾರಣ ಮೈಕಟ್ಟಿನವರಾಗಿದ್ದಾರೆ. 5.6 ಅಡಿ ಎತ್ತರವಿದ್ದಾರೆ. ಹಿಂದಿ, ರಾಜಸ್ತಾನಿ, ಕೊಂಕಣಿ ಜೊತೆ ಇಂಗ್ಲೀಷ್’ನ್ನು ಅವರು ಮಾತನಾಡುತ್ತಾರೆ. ಕಾಲೇಜಿನಿಂದ ಕಾಣೆಯಾಗುವಾಗ ಅವರು ಬಿಳಿ ಬಣ್ಣದ ಚೂಡಿದಾರ ಟಾಪ್ ಮತ್ತು ಬ್ಲೂ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಸಾಗರ ಬಿಷನುಪದ ಪೋರಿಯಾ ಅವರು ಗೋಧಿ ಮೈಬಣ್ಣದವರಾಗಿದ್ದು, ಸಾಧಾರಣ ಮೈಕಟ್ಟುಹೊಂದಿದ್ದಾರೆ. 5.5 ಅಡಿ ಎತ್ತರವಿದ್ದಾರೆ. ಸಾಗರ ಅವರು ಹಿಂದಿ, ಬಂಗಾಲಿ, ಕೊಂಕಣಿ ಹಾಗೂ ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಕಾಲೇಜಿನಿಂದ ಕಾಣೆ ಆಗುವ ವೇಳೆ ಅವರು ಬೂದು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಸಿದ್ದರು.

ಅವರಿಬ್ಬರ ಹುಡುಕಾಟ ಮುಂದುವರೆದಿದ್ದು, ಅವರ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಹೀಗಾಗಿ ಅವರು ಎಲ್ಲಾದರೂ ಕಂಡರೆ 8277987514, 8277987555 ಅಥವಾ 9480805200 ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!