BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Karkala ಜೈ ತುಲುನಾಡ್ (ರಿ.) ಕಾರ್ಕಳ ಘಟಕ ತುಲು ಲಿಪಿ ಪುಸ್ತಕ ಬಿಡುಗಡೆ ಮತ್ತು ಒಂದು ದಿನದ ತುಲು ಲಿಪಿ ಕಲಿಕೆ ಕಾರ್ಯಕ್ರಮ


ಕಾರ್ಕಳ, ಜುಲೈ 04 : ಜೈ ತುಲುನಾಡ್ (ರಿ.) ಕಾರ್ಕಳ ಘಟಕದ ವತಿಯಿಂದ "ತುಲು ಲಿಪಿ ಪುಸ್ತಕ ಬಿಡುಗಡೆ ಮತ್ತು ಒಂದು ದಿನದ ತುಲು ಲಿಪಿ ಕಲಿಕೆ " ಕಾರ್ಯಕ್ರಮವು ಆಗಸ್ಟ್ 02 ರ ಆದಿತ್ಯವಾರ ಶ್ರೀ ಸಾಯಿ ಸಭಾಭವನ ಸಮೃದ್ಧಿ ಕಾಂಪ್ಲೆಕ್ಸ್, ಬಜಗೋಳಿ ಇಲ್ಲಿ ಜೈ ತುಲುನಾಡ್ (ರಿ) ಕಾರ್ಕಳ ಘಟಕದ ಅಧ್ಯಕ್ಷರಾದ ಮಹೇಶ್ ಕುಲಾಲ್ ಬೇಲಾಡಿ ಇವರ  ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕೃಷ್ಣ ಎಲ್ ಶೆಟ್ಟಿ ಇವರು ಸಂಘಟನೆಯ ಕಾರ್ಯವನ್ನು ಮೆಚ್ಚಿ ತುಲು ಲಿಪಿ ಇನ್ನಷ್ಟು ಕಡೆ ಬೆಳೆಯಬೇಕು ಅದಕ್ಕೆ ರಾಜ್ಯಭಾಷೆಯ ಸ್ಥಾನಮಾನ ಸಿಗಬೇಕು ಎಂದರು .

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಮತ್ತು ಅಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಇವರು "ಗೇನದ ಬೊಲ್ಪು "ಎಂಬ ತುಲು ಲಿಪಿ ಪುಸ್ತಕವನ್ನು ಸಂಪ್ರದಾಯಿಕವಾಗಿ ಕಳಸಕ್ಕೆ ಭತ್ತ ಹಾಕುವ ಮೂಲಕ  ಬಿಡುಗಡೆ ಮಾಡಿದರು.

ತದನಂತರ ಆಕಾಶ್ ರಾಜ್ ಅವರು  ತುಳು ಭಾಷೆ, ತುಳು ಲಿಪಿಯ  ಬಗ್ಗೆ ಜೈ ತುಲುನಾಡ್  ಸಂಘಟನೆ ನಡೆಸುತ್ತಿರುವ ಅಭಿಯಾನದ ಕುರಿತು ವಿವರವಾಗಿ ತಿಳಿಸಿ ಎಲ್ಲಾರೂ ಇದಕ್ಕೆ ಕೈ ಜೋಡಿಸಿದರೆ ಮಾತ್ರ ಇವರ ನಿರಂತರ ಹೋರಾಟಕ್ಕೆ ಜಯ ಸಿಗುತ್ತದೆ. ಆದಷ್ಟು ಎಲ್ಲಾ ಕಡೆಗಳಲ್ಲೂ ಎಲ್ಲಾರೂ ತುಳು ಮಾತನಾಡುವುದರ ಜೊತೆ ತುಳು ಲಿಪಿ ಕಲಿಯಲು ಮುಂದೆ ಬರಬೇಕು. ಈಗಷ್ಟೇ ಬಿಡುಗಡೆ ಆದ ಈ ಪುಸ್ತಕ ಇನ್ನಷ್ಟು ಜನರ ಮನಮುಟ್ಟುವಂತೆ ಮಾಡುತ್ತದೆ  ಎಂದರು.

ಕಾರ್ಯಕ್ರಮದಲ್ಲಿ ಗಣ್ಯರಾಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾದ ಶ್ರೀ ಸುಮಿತ್ ನಲ್ಲೂರ್, ಗ್ಯಾರಂಟಿ ಯೋಜನೆ ಇದರ ಅಧ್ಯಕ್ಷರಾದ ಶ್ರೀ ಅಜಿತ್ ಹೆಗ್ಡೆ, ಮದ್ಯಸ್ತರಾದ ಶ್ರೀ ಸದಾನಂದ ಸಾಲಿಯಾನ್, ಬಜಗೋಳಿಯ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಎಸ್ ಪೂಜಾರಿ, ಸಮಾಜ ಸೇವಕರಾದ ಗಾಯತ್ರಿ ಪ್ರಭು, ದೈವರಾದಕರಾದ ಶ್ರೀ ರಾಜು ಪರವ, ಹಾಗೂ ಜೈ ತುಳುನಾಡ್ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಅಶ್ವಥ್ ತುಲುವೆ, ಜೈ ತುಲುನಾಡ್ ಮಂಗಳೂರು ಮತ್ತು ಉಡುಪಿ ಘಟಕದ ಅಧ್ಯಕ್ಷರು, ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಅಜಿತ್ ಹೆಗ್ಡೆ ಇವರು  ತುಳು ಬರಿ ಒಂದು ಜಾಗಕ್ಕೆ ಸೀಮಿತ ಅಲ್ಲ, ಎಲ್ಲಾ ಭಾಷೆಗಳಿರುವ ಈ ನಾಡಲ್ಲಿ ತುಳುವಿಗೆ ಅದರದ್ದೇ ಆದ ಲಿಪಿ ಇದೆ ತುಳು ಮಾತಾಡುವವರು ಇದ್ದರೂ ಲಿಪಿಯ ಜ್ಞಾನ ತುಂಬ ಜನರಿಗೆ ತಿಳಿದಿಲ್ಲ ಅದರ ಕೆಲಸ ಜೈ ತುಲುನಾಡ್ ಸಂಘ ಮಾಡುತ್ತ ಬರುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜೈ ತುಲುನಾಡ್ (ri) ಉಡುಪಿ ಘಟಕದ ಪ್ರಚಾರ ಸಮಿತಿ ನಿರ್ವಾಹಕರಾದ ಶ್ರೀ ಪ್ರಶಾಂತ್ ಕುಂಜೂರ್ ( ತುಲು ಲಿಪಿ ಪುಸ್ತಕ ಎಡಿಟರ್ ) ಇವರಿಗೆ ಶಾಲು ಹೊದಿಸಿ ಗೌರವ ಸನ್ಮಾನಿಸಲಾಯಿತು.

ಜೈ ತುಲುನಾಡ್ (ರಿ.)ಕಾರ್ಕಳ ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ಕುಲಾಲ್ ಬೇಲಾಡಿ ಇವರು ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಸೌಮ್ಯ ಕುಂದರ್  ನಿರೂಪಿಸಿದರು, ಸಮನ್ವಿ ಪ್ರಾರ್ಥಿಸಿದರು, ಗೌತಮಿ ಸ್ವಾಗತಿಸಿದರು,  ಜೈ ತುಲುನಾಡ್ (ರಿ.) ಕಾರ್ಕಳ ಘಟಕದ ಕಾರ್ಯದರ್ಶಿಯಾದ ಅಕ್ಷತಾ ಪ್ರಾಸ್ತವಿಕ ವರದಿ ಮಂಡಿಸಿದರು, ಉಪಾಧ್ಯಕ್ಷರಾದ ನಿತಿನ್ ನಲ್ಲೂರ್ ವಂದಿಸಿದರು. ಕಾರ್ಯಕ್ರಮದ ನಂತರ ಆಗಮಿಸಿದ ಸಾರ್ವಜನಿಕರಿಗೆ ಒಂದು ದಿನದ  ತುಲು ಲಿಪಿ ಕಾರ್ಯಗಾರವನ್ನು ತುಲು ಲಿಪಿ ಶಿಕ್ಷಕರಾದ ಕಿರಣ್ ತುಲುವೆ ನಡೆಸಿಕೊಟ್ಟರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!