ಕಣಿಯೂರು, ಆಗಸ್ಟ್ 29: ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋದ್ಯಮದ ಮಾಲಕರಾದ ಶಿವಶಂಕರ್ ನಾಯಕ್ ಅವರು ಭೇಟಿ ನೀಡಿದರು. ಇದೇ ಸಂದರ್ಭ ಕೇಂದ್ರದ ಮಕ್ಕಳ ಮಧ್ಯಾಹ್ನದ ಊಟಕ್ಕೆ ಪ್ರತಿ ತಿಂಗಳು ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರದ ಕುಂದು-ಕೊರತೆಗಳನ್ನು ಪರಿಶೀಲಿಸಿದ ಅವರು, ಸಂತ್ರಸ್ತರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಫುಲ್ಲಚಂದ್ರ, ಎಸ್‌ಕೆಡಿಆರ್‌ಡಿಪಿ (SKDRDP) ಕಣಿಯೂರು ವಲಯಾಧ್ಯಕ್ಷರಾದ ರಮಾನಂದ ಪೂಜಾರಿ ಮುಗೆರೋಡಿ, ಮೇಲ್ವಿಚಾರಕಿ ಶ್ರೀಮತಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ, ಸಿಬ್ಬಂದಿಗಳಾದ ಶಾಲಿನ್, ಪ್ರಮೀಳಾ, ಉಷಾ, ಶಿಕ್ಷಕಿಯರಾದ ಸುಜಾತ, ರಶ್ಮಿತ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.