BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Hyderabad Police crackdown Food safety ಹೈದರಾಬಾದ್‌ನಲ್ಲಿ ಜೀವಕ್ಕೆ ಮಾರಕವಾದ 25 ಟನ್ ಕಲಬೆರಕೆ ಮಸಾಲೆ ಪದಾರ್ಥ ವಶ; ಮೂವರ ಬಂಧನ


ಹೈದರಾಬಾದ್, ಆಗಸ್ಟ್ 04 :  ಹೈದರಾಬಾದ್‌ನಲ್ಲಿ ಕಳಪೆ ಹಾಗೂ ಕಲಬೆರಕೆ ಮಸಾಲೆ ಪದಾರ್ಥಗಳನ್ನು ತಯಾರಿಸುತ್ತಿದ್ದ ಘಟಕಗಳ ಮೇಲೆ ಹೈದರಾಬಾದ್ ಪೊಲೀಸರ ವಿಶೇಷ ಘಟಕ H-FAST ತಂಡ ದಾಳಿ ನಡೆಸಿದ್ದು ಭಾರಿ ಪ್ರಮಾಣದಲ್ಲಿ ಕಳಪೆ ಮತ್ತು ಮಸಾಲೆ ಪದಾರ್ಥಗಳನ್ನು ವಶ ಪಡಿಸಿಕೊಂಡಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ನಗರ ಪೊಲೀಸ್ ಕಮಿಷನರ್  ಸಜ್ಜನಾರ್ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಂದ ಬಂದ ಮಾಹಿತಿಯ ಮೇರೆಗೆ 13 ಮಸಾಲೆ ವ್ಯಾಪಾರ ಸಂಸ್ಥೆಗಳ ಮೇಲೆ ಏಕ ಕಾಲದಲ್ಲಿ ಹೆಚ್ ಫಾಸ್ಟ್ ತಂಡ ದಾಳಿ ನಡೆಸಿದಾಗ 25 ಟನ್‌ಗಳಿಗೂ ಅಧಿಕ ಕಲಬೆರಕೆ ಮಸಾಲೆ ಪದಾರ್ಥಗಳು ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಮೈಲಾರ್‌ದೇವಪಲ್ಲಿ ಮತ್ತು ಬಾಲಾಪುರ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಓಮಕಾಳು , ಜೀರಿಗೆ, ಲವಂಗ, ಶಾಹಿಜೀರ ಮತ್ತು ಸಾಸಿವೆ ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳಲ್ಲಿ ಭಾರಿ ಪ್ರಮಾಣದಲ್ಲಿ  ಕಲಬೆರಕೆ ಪತ್ತೆಯಾಗಿದೆ.

ಬಟ್ಟೆಗೆ ಬಳಸುವ ಬಣ್ಣಗಳು ಮತ್ತಿತರ ಕೃತಕ ಬಣ್ಣಗಳನ್ನು ಬಳಸಿ ಈ ಮಸಾಲೆ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು ಎಂದು ಪೋಲಿಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.   ಅಕ್ಕಿ ಹೊಟ್ಟು ಎಣ್ಣೆಯೊಂದಿಗೆ ಟಾಲ್ಕಮ್ ಪೌಡರ್ ಮತ್ತು ಕೈಗಾರಿಕಾ ಬಣ್ಣಗಳನ್ನು ಬಳಸಲಾಗುತ್ತಿತ್ತು. ಮಸಾಲೆ ಪದಾರ್ಥಗಳು ಹೊಳೆಯುವಂತೆ ಮಾಡಲು ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು 89 ಟನ್ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ಸುರಕ್ಷತಾ ಕಾಯ್ದೆಯಡಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಲಬೆರಕೆ ಮಸಾಲೆ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯದ (ಲ್ಯಾಬ್) ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕಲಬೆರಕೆ ಆಹಾರವನ್ನು ಸೇವಿಸುವುದರಿಂದ ಯಕೃತ್ತು (ಲಿವರ್) ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗಬಹುದು ಹಾಗೂ ಕ್ಯಾನ್ಸರ್, ಅಲರ್ಜಿ ಮತ್ತು ಜೀರ್ಣಕ್ರಿಯೆ ದೋಷಗಳಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಪೋಲಿಸ್ ಕಮಿಷನರ್ ಸಜ್ಜನಾರ್ ಎಚ್ಚರಿಸಿದ್ದಾರೆ.

ಎಚ್‌-ಫಾಸ್ಟ್ (H-FAST) ಆರಂಭವಾಗಿ 140 ದಿನಗಳಾಗಿದ್ದು, ಇದುವರೆಗೆ 659 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು  202 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 246 ಟನ್ ಕಲಬೆರಕೆ ಆಹಾರ ಪದಾರ್ಥಗಳಕೋರಿದ್ದಾರೆ.ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಸಂಶಯಾಸ್ಪದ ಆಹಾರ ಪದಾರ್ಥಗಳು ಕಂಡುಬಂದಲ್ಲಿ ತಕ್ಷಣವೇ ತಮಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ. 

ಹೈದರಾಬಾದ್‌ನಲ್ಲಿ ಜೀವಕ್ಕೆ ಮಾರಕವಾದ 25 ಟನ್ ಕಲಬೆರಕೆ ಮಸಾಲೆ ಪದಾರ್ಥ ವಶ; ಮೂವರ ಬಂಧನ



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!