ಬೆಳ್ತಂಗಡಿ, ಆಗಸ್ಟ್ 17 : ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರ ಜನ್ಮದಿನದ ಸಂಭ್ರಮದ ಹಿನ್ನೆಲೆಯಲ್ಲಿ, ಪೆರ್ಲ-ಬೈಪಾಡಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು .
ಶಾಸಕ ಹರೀಶ್ ಪೂಂಜಾ ಅವರ ಜನುಮದಿನದ ಸಲುವಾಗಿ ಅಭಿಮಾನಿಗಳು ಭಕ್ತಿಪೂರ್ವಕವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಂದಾರು ಗ್ರಾಮದ ಪ್ರಸಿದ್ಧ ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಅಭಿಮಾನಿ ಬಳಗದ ಸದಸ್ಯರು ಜಮಾಯಿಸಿ, ಶಾಸಕರಿಗೆ ದೀರ್ಘಾಯುಷ್ಯ, ಉತ್ತಮ ಆಯುರಾರೋಗ್ಯ ಹಾಗೂ ಐಶ್ವರ್ಯ ಪ್ರಾಪ್ತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲಿ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಶಾಶ್ವತ ಪೂಜೆ ಮತ್ತು ವಿಶೇಷ ಹರಕೆಗಳನ್ನು ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಾಯಕನ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕರಾದ ಲೋಕ್ಷತ್ ಗೌಡ ಅನಿಲ,ಪೆರ್ಲ -ಬೈಪಾಡಿ ಬೂತ್ ಸಮಿತಿ ಕಾರ್ಯದರ್ಶಿ ಲೋಹಿತ್ ಗೌಡ ಸೋನಕುಮೇರು, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಆಡಳಿತ ಮೊಕ್ತೇಸರರಾದ ಹರೀಶ್ ಗೌಡ ಕೊಡಿಮಜಲು,ಮಾಜಿ ಬೂತ್ ಕಾರ್ಯದರ್ಶಿ ಲಕ್ಷ್ಮೀಕಾಂತ ಗೌಡ ಕೀಲಾರ್, ನಾರಾಯಣ ಗೌಡ ಪಯ್ಯೋಡಿ, ದೇವಪ್ಪ ಪರ್ಲಾರ್, ಪವನ್ ಒಲಕ್ಕುಡೆ , ಕೇಶವ ಏಕ, ರಂಜಿತ್ ಬಲಿಪೆ, ತೀವರ್ಲೆಸ್ ಬಲಿಪೆ, ಭರತ್ ಕುಕ್ಕಿಲ, ದೀಪಕ್ ಕೀಲಾರ್ ಹಾಗೂ ಇನ್ನಿತರ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.