BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Elephant attack ಬೆಳ್ತಂಗಡಿಯಲ್ಲಿಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 5ಲಕ್ಷ ರೂ. ತುರ್ತು ಪರಿಹಾರ ವಿತರಣೆ, ₹5000 ಮಾಸಾಶನ ಘೋಷಣೆ


ಬೆಳ್ತಂಗಡಿ, ಆಗಸ್ಟ್ 03 : ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ  ರೆಖ್ಯಾ ಗ್ರಾಮದ ನೆಲ್ಯಡ್ಕ–ಇಡ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಅವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ತುರ್ತು ಸರ್ಕಾರ ತುರ್ತು ಪರಿಹಾರ ವಿತರಿಸಿದೆ.

ಬಾಲಕೃಷ್ಣ ಗೌಡ ಅವರು ಕೆಲಸ ಮುಗಿಸಿ ಮನೆಗೆ ಶನಿವಾರ ಸಂಜೆ ಹಿಂದಿರುಗುವ ವೇಳೆ ನಾಪತ್ತೆಯಾಗಿದ್ದರು. ಅವರು ಮನೆಗೆ ಬಾರದ ಕಾರಣ ಕುಟುಂಬಸ್ಥರು ಅವರನ್ನು ಹುಡುಕಿದ ಸಂದರ್ಭದಲ್ಲಿ ದಾರಿಯ ಮಧ್ಯೆ ಅವರ ಪ್ಲಾಸ್ಟಿಕ್ ರೈನ್ ಕೋಟ್ ಪತ್ತೆಯಾಗಿತ್ತು. ಸಮೀಪದಲ್ಲಿ ಕಾಡಾನೆ ಹೆಜ್ಜೆಗಳ ಗುರುತುಗಳು ಕಂಡುಬಂದಿದ್ದವು. ಇದರಿಂದ ಅವರ ಮೇಲೆ ಕಾಡಾನೆ ದಾಳಿಯ ಶಂಕೆ ವ್ಯಕ್ತವಾಗಿತ್ತು.ಅರಣ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಬಾಲಕೃಷ್ಣ ಗೌಡ ಅವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಅರಣ್ಯ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮತ್ತು ಮೃತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡು ತುರ್ತು ಪರಿಹಾರ ವಿತರಿಸಿದ್ದಾರೆ.

ಬಾಲಕೃಷ್ಣ ಗೌಡ ಅವರು ಶನಿವಾರ ಮುಚ್ಚಿರಡ್ಕ ಭಾಗದಲ್ಲಿ ಕೃಷಿ/ಕೂಲಿ ಕೆಲಸ ಮುಗಿಸಿ ಸಂಜೆ ಮನೆಗೆ ಮರಳಬೇಕಿತ್ತು. ಆದರೆ ತಡರಾತ್ರಿಯಾದರೂ ಅವರು ಮನೆಗೆ ತಲುಪದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಸಂಚರಿಸುವ ದಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರು ಮಳೆಯಿಂದ ರಕ್ಷಣೆಗೆ ಹೊದ್ದುಕೊಳ್ಳುತ್ತಿದ್ದ ಪ್ಲಾಸ್ಟಿಕ್ ದಾರಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದರಿಂದ ಅನುಮಾನಗೊಂಡು ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದಾಗ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಗಿದೆ.ಘಟನಾ ಸ್ಥಳದ ತೀರಾ ಸಮೀಪದಲ್ಲಿ ಕಾಡಾನೆಯ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿತ್ತು. 

​​ಸುಬ್ರಹ್ಮಣ್ಯ, ಕಡಬ ಹಾಗೂ ಬೆಳ್ತಂಗಡಿ ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ತಕ್ಷಣವೇ ಸೂಕ್ತ ಆನೆ ತಡೆ ಗೋಡೆ ಅಥವಾ ಕಾರ್ಯಪಡೆ ರಚಿಸಿ ಗ್ರಾಮಸ್ಥರ ಜೀವ ರಕ್ಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!