BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

DYFI ಡಿವೈಎಫ್ಐ 15ನೇ ದ.ಕ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ



ಮಂಗಳೂರು, ಆಗಸ್ಟ್ 13 : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್ಐ ದ.ಕ ಜಿಲ್ಲಾ ಸಮ್ಮೇಳನವು ಸಪ್ಟೆಂಬರ್ 20, 2026ರಂದು ಮಂಗಳೂರಿನಲ್ಲಿ ನಡೆಯಲಿದೆ. ಸ್ಥಳೀಯ ಘಟಕಗಳಿಂದ ಹಿಡಿದು ರಾಷ್ಟ್ರೀಯ ಮಟ್ಟದ ವರೆಗೆ ನಡೆಯಲಿರುವ ಸಮ್ಮೇಳನವು ಯುವಜನರ ನಿರುದ್ಯೋಗದ ಸಮಸ್ಯೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ಮತ್ತು ವ್ಯಾಪಾರೀಕರಣ ಸೇರಿದಂತೆ ದೇಶದ ಜನಸಾಮಾನ್ಯರನ್ನು ಬಾಧಿಸುವ ಸಮಸ್ಯೆಗಳಿಗೆ ಎದುರಾಗಿ ಹೋರಾಟಕ್ಕಿಳಿಸುವ, ಅನ್ಯಾಯ, ದೌರ್ಜನ್ಯಗಳಿಗೆದುರಾಗಿ ಧ್ವನಿ ಎತ್ತುವ ಪ್ರಯತ್ನವನ್ನು ನಿರಂತರಗೊಳಿಸುವ ಕುರಿತು ಈ ಎಲ್ಲಾ ಸಮ್ಮೇಳನಗಳಲ್ಲಿ ಸಂಘಟನೆ ಚರ್ಚೆ ನಡೆಸಲಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಡಿವೈಎಫ್ಐ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಮತ್ತು ಯುವಜನರ ಭದ್ರತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ 15ನೇ ದ.ಕ ಜಿಲ್ಲಾ ಸಮ್ಮೇಳನವನ್ನು ಸಂಘಟಿಸಿದ್ದು ಜಿಲ್ಲೆಯ ಯುವಜನರನ್ನು ಕಾಡುವ ಉದ್ಯೋಗದ ಪ್ರಶ್ನೆಯ ಕುರಿತಾಗಿ ಈ ಸಮ್ಮೇಳನವು ಚರ್ಚಿಸಲಿದ್ದು ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿರುವ ಶಿಕ್ಷಣ ಮತ್ತು ಆರೋಗ್ಯದ ಖಾಸಗೀಕರಣದ ವಿರುದ್ದದ ಹೋರಾಟದ ಮುನ್ನೋಟವನ್ನು ಈ ಸಮ್ಮೇಳನವು ಕಂಡುಕೊಳ್ಳಲಿದೆ.

ಇಂದು ( 13-08-26) ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದೆ. ಜಿಲ್ಲೆಯ ಯುವಜನ ಚಳುವಳಿಯ ಹಾದಿಗೆ ಸದಾ ಮಾರ್ಗದರ್ಶನ ನೀಡಿ ಅವರಲ್ಲಿ ಪ್ರಗತಿಪರ ಚಿಂತನೆ ಮತ್ತು ಹೋರಾಟದ ಪ್ರಜ್ಞೆಯನ್ನು ಬೆಳೆಸಿದ ಹಿರಿಯ ಚಿಂತಕರಾದ ಎನ್.ಐ.ಟಿ.ಕೆ.ಯ ನಿವೃತ್ತ ಪ್ರಾಧ್ಯಾಪಕರು ಪ್ರೊ. ರಾಜೇಂದ್ರ ಉಡುಪ ಅವರು ಡಿವೈಎಫ್ಐ 15ನೇ ದ.ಕ. ಜಿಲ್ಲಾ ಸಮ್ಮೇಳನದ ಲಾಂಛನವನ್ನು ತಮ್ಮ ಸುರತ್ಕಲ್ ನ ನಿವಾಸದಲ್ಲಿ ಅನಾವರಣಗೊಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲೆಯ ಯುವಜನ ಚಳುವಳಿಯ ಬೆಳವಣಿಗೆ, ಇಂದಿನ ಸವಾಲುಗಳು ಹಾಗೂ ಮುಂದಿನ ಹೋರಾಟಗಳ ಕುರಿತು ಡಿವೈಎಫ್ಐ ಜಿಲ್ಲಾ ಮುಖಂಡರ ಜೊತೆ ಆತ್ಮೀಯವಾಗಿ ಚರ್ಚಿಸಿದರು. 

ಈ ವೇಳೆ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಜಿಲ್ಲಾ ಪದಾಧಿಕಾರಿಗಳಾದ ರಿಜ್ವಾನ್ ಹರೇಕಳ, ರಜಾಕ್ ಮುಡಿಪು ಉಪಸ್ಥಿತರಿದ್ದರು. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!