ಬೆಂಗಳೂರು, ಆಗಸ್ಟ್ 03: ಭಾರಿ ನಿರೀಕ್ಷೆಯ ಡಿಕೆ ಶಿವಕುಮಾರ್ ಅವರ ನಾಯಕತ್ವದ ರಾಜ್ಯ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 20 ಅಭ್ಯರ್ಥಿಗಳು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರಿಸಲಿದ್ದಾರೆ. ಬಹುತೇಕ ಹೊಸಮುಖಗಳನ್ನೇ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ ಹಲವರು ಈ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಎಚ್ ಸಿ ಮಹದೇವಪ್ಪ, ಎಂ ಸಿ ಸುಧಾಕರ್, ದಿನೇಶ್ ಗುಂಡೂರಾವ್, ಎಚ್ ಕೆ ಪಾಟಿಲ್, ಕೆ ವೆಂಕಟೇಶ್, ಲಕ್ಷ್ಮೀ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಶರಣ ಬಸಪ್ಪ ದರ್ಶನಾಪುರಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಈ ಬಾರಿ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಹೈಕೋರ್ಟ್ ತೀರ್ಪಿನಿಂದಾಗಿ ಕೆಲವೇ ದಿನಗಳ ಹಿಂದೆ ಎಂಎಲ್‌ಸಿ ಸ್ಥಾನ ಪಡೆದಿದ್ದ ಏಕೈಕ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ರೋಣ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಸ್ಥಾನ ನೀಡಿದರೆ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಉಪ ಸ್ಪೀಕರ್ ಸ್ಥಾನಮಾನ ದೊರೆತಿದೆ.
ನೂತನ ಸಚಿವರ ಪಟ್ಟಿ
1. ಪಿ.ಎಂ.ನರೇಂದ್ರಸ್ವಾಮಿ
2. ಶಿವರಾಜ್ ತಂಗಡಗಿ
3. ರುದ್ರಪ್ಪ ಲಮಾಣಿ
4. ಕೆ.ಎಸ್.ಬಸವಂತಪ್ಪ
5. ಬಿ.ನಾಗೇಂದ್ರ
6. ಟಿ.ರಘುಮೂರ್ತಿ
7. ಜಮೀರ್ ಅಹಮದ್ ಖಾನ್
8. ರಿಜ್ವಾನ್ ಅರ್ಷದ್
9. ಸಂತೋಷ್ ಲಾಡ್
10. ಮಧು ಬಂಗಾರಪ್ಪ
11. ಪುಟ್ಟರಂಗಶೆಟ್ಟಿ
12. ಮಂಕಾಳ ವೈದ್ಯ
13. ಅಜಯ್ ಸಿಂಗ್
14. ಎನ್.ಚಲುವರಾಯ ಸ್ವಾಮಿ
15. ಕೆ.ಎಂ.ಶಿವಲಿಂಗೇಗೌಡ
16. ಎಚ್.ಸಿ.ಬಾಲಕೃಷ್ಣ
17. ಗಾಯತ್ರಿ ಶಾಂತೇಗೌಡ
18. ಬಸವರಾಜ ರಾಯರೆಡ್ಡಿ
19. ವಿಜಯಾನಂದ್ ಕಾಶಪ್ಪನವ
20. ಲಕ್ಷ್ಮಣ ಸವದಿ
