BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

CPR & Heart Attack ಮೂರ್ಛೆ ಹೋದ ಶಿಕ್ಷಕಿ, ಹಾರ್ಟ್ ಆ್ಯಟಕ್ ಎಂದು ತಪ್ಪಾಗಿ ಭಾವಿಸಿ ಸಿಪಿಆರ್(CPR) ಮಾಡಿ ಪಕ್ಕೆಲುಬು ಮುರಿದು ಹಾಕಿದ ಯುವಕರು...!


ಕೈಲಾರಸ್(ಮಧ್ಯಪ್ರದೇಶ), ಆಗಸ್ಟ್ 01:ಮೂರ್ಛೆ ಹೋಗಿದ್ದ ಶಿಕ್ಷಕಿಗೆ ಹೃದಯಾಘಾತ(Heart Attack)ವಾಗಿದೆ ತಪ್ಪಾಗಿ ಭಾವಿಸಿ ಸಿಪಿಆರ್(CPR) ಮಾಡಲು ಹೋಗಿ ಶಿಕ್ಷಕಿ ಪಕ್ಕೆಲುಬುಗಳನ್ನು ಮುರಿದು ಮುರಿದು ಹಾಕಿದ ಘಟನೆ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.  

 ಜಿಲ್ಲೆಯ ಕೈಲಾರಸ್ ಪ್ರದೇಶದ ಭುರಾಬಲಿ ಕ್ರಾಸಿಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 552 ರಲ್ಲಿ ಈ ಘಟನೆ ನಡೆದಿದೆ. ಲಲಿತಾ ಧಾಕಡ್ (41) ಪಕ್ಕೆಲುಬುಗಳನ್ನು ಮುರಿಸಿಕೊಂಡ ಶಿಕ್ಷಕಿಯಾಗಿದ್ದಾರೆ.  ತಿಲೋಂಜರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿದ್ದ ಲಲಿತಾ ಅವರುಕೆಲಸಕ್ಕೆ ಹೋಗುತ್ತಿದ್ದಾಗ ತೀವ್ರವಾದ ಬಿಸಿಲ ಬೇಗೆಯಿಂದಾಗಿ ಅವರು ಮೂರ್ಛೆ ಹೋಗಿ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭ ಆ ದಾರಿಯಲ್ಲಿ ಹೋಗುತ್ತಿದ್ದ ಸೂರಜ್ ಧಾಕಡ್ ಮತ್ತು ಪವನ್ ಗುರ್ಜರ್ ಎಂಬ ಇಬ್ಬರು ಸಾಮಾಜಿಕ ಕಾರ್ಯಕರ್ತರು, ಆಕೆಗೆ ಹೃದಯಾಘಾತ (Heart Attack) ಆಗಿದೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಗಾಬರಿಯಿಂದ ಅವರು ಆಕೆಗೆ ಸತತವಾಗಿ ಸಿಪಿಆರ್ (CPR) ನೀಡಿದ್ದಾರೆ.  ತಪ್ಪಾದ ಮತ್ತು ಗಡಿಬಿಡಿಯ ಸಿಪಿಆರ್‌ನಿಂದಾಗಿ ಶಿಕ್ಷಕಿಯ ಎರಡು ಪಕ್ಕೆಲುಬುಗಳು (ribs) ಮುರಿದಿವೆ. ಸದ್ಯ ಅವರನ್ನು ಕೈಲಾರಸ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಸ್ಪತ್ರೆಯ ಎಕ್ಸ್-ರೇ ಪರೀಕ್ಷೆಯಲ್ಲಿ ಆಕೆಗೆ ಹೃದಯಾಘಾತವಾಗಿಲ್ಲ ಎಂಬುದು ಪತ್ತೆಯಾಗಿದೆ. ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳುಈ ಘಟನೆಯು ತುರ್ತು ಸಂದರ್ಭಗಳಲ್ಲಿ ಸರಿಯಾದ ಪ್ರಥಮ ಚಿಕಿತ್ಸೆಯ ಬಗ್ಗೆ ಜ್ಞಾನ ಇಲ್ಲದರ ಪರಿಣಾಮ ಈ ದುರ್ಘಟನೆ ನಡೆದಿದೆ. 

ಯುವಕರ ತಪ್ಪುಗ್ರಹಿಕೆ, CPR ಮಾಡಲು ಹೋಗಿ ಮಹಿಳೆಯ ಪಕ್ಕೆಲುಬು ಮುರಿತ

ವೈದ್ಯರು ಸಿಪಿಆರ್ ಬಗ್ಗೆ ಹೇಳುದೇನು ?

ಒಬ್ಬ ವ್ಯಕ್ತಿಯು ಪ್ರಜ್ಞೆ ಕಳೆದುಕೊಂಡು, ಉಸಿರಾಟ ಸಂಪೂರ್ಣವಾಗಿ ನಿಂತುಹೋದಾಗ ಮಾತ್ರ ಸಿಪಿಆರ್ (CPR) ನೀಡಬೇಕು ಎಂದು ವೈದ್ಯಕೀಯ ಮಾರ್ಗಸೂಚಿಗಳು ತಿಳಿಸುತ್ತವೆ.  ಬಿಸಿಲಿನ ಬೇಗೆಯಿಂದ ತಲೆತಿರುಗುವಿಕೆ ಅಥವಾ ಮೂರ್ಛೆ ಹೋದಾಗ, ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಕರೆದೊಯ್ಯಬೇಕು. ಅವರ ಬಟ್ಟೆಗಳನ್ನು ಸಡಿಲಗೊಳಿಸಿ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು.

 ಸಿಪಿಆರ್(CPR) ನೀಡುವಾಗ ಎದೆಯ ಭಾಗದ ಮೇಲೆ ಹೆಚ್ಚಿನ ಒತ್ತಡ ಹಾಕಬೇಕಾಗುತ್ತದೆ. ನಿಜವಾದ ಹೃದಯಾಘಾತದ ಸಂದರ್ಭದಲ್ಲಿ ಜೀವ ಉಳಿಸಲು ಇದು ಮುಖ್ಯವಾದರೂ, ಅಗತ್ಯವಿಲ್ಲದಿದ್ದಾಗ ಸಿಪಿಆರ್ ನೀಡುವುದರಿಂದ ಮೂಳೆ ಮುರಿತದಂತಹ ಗಂಭೀರ ಗಾಯಗಳಾಗಬಹುದು.ತುರ್ತು ಸಂದರ್ಭಗಳಲ್ಲಿ ಸರಿಯಾಗಿ ಸ್ಪಂದಿಸಲು ಮತ್ತು ಇಂತಹ ತಪ್ಪುಗಳನ್ನು ತಡೆಯಲು ಪ್ರಮಾಣೀಕೃತ ಪ್ರಥಮ ಚಿಕಿತ್ಸಾ ತರಬೇತಿಯನ್ನು (First-Aid Training) ಪಡೆಯುವುದು ಒಳ್ಳೆಯದು ಎಂದಿದ್ದಾರೆ. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!