ಚಿಕ್ಕಮಗಳೂರು,ಆಗಸ್ಟ್ 06 : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಮುಂದುವರೆದಿದೆ. ಮುಳ್ಳಯ್ಯನಗಿರಿ – ದತ್ತಪೀಠ (Dattapeeta) ಭಾಗದಲ್ಲಿ ಭಾರೀ ಗಾಳಿ, (Rain) ಮಳೆಯಾಗುತ್ತಿದೆ. ಚನ್ನಗೋಡನಹಳ್ಳಿ ಸಮೀಪ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಭಾರೀ ಗಾಳಿಗೆ ಮರವೊಂದು ಬುಡಸಮೇತ ಉರುಳಿ ಪ್ರವಾಸಿ ಬೈಕ್ ಮೇಲೆ ಬಿದ್ದಿದೆ. ಮರದ ತುದಿ ಭಾಗ ಮಾತ್ರ ಬೈಕ್‌ಗೆ ತಗುಲಿದ್ದರಿಂದ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಮಿಯ ತೇವಾಂಶ ಇನ್ನೂ ಹೆಚ್ಚಿರುವುದರಿಂದ ಹಲವೆಡೆ ಮಣ್ಣು ಕುಸಿಯುವ ಘಟನೆಗಳು ವರದಿಯಾಗುತ್ತಿವೆ. ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದಲ್ಲೂ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರದಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ತೆರಳುವ ಪ್ರವಾಸಿಗರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Chikkamagaluru Great escape ಚಿಕ್ಕಮಗಳೂರಿನಲ್ಲಿ ಗಾಳಿಮಳೆಗೆ ಬುಡ ಸಮೇತ ಉರುಳಿ ಬಿದ್ದ ಮರದಡಿಯಿಂದ ಕೂದಲೆಳೆಯ ಅಂತರದಲ್ಲಿ ಸವಾರ ಪಾರು
ಸುದ್ದಿವಾಣಿ
8/06/2026 03:22:00 PM
ಚಿಕ್ಕಮಗಳೂರು,ಆಗಸ್ಟ್ 06 : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಮುಂದುವರೆದಿದೆ. ಮುಳ್ಳಯ್ಯನಗಿರಿ – ದತ್ತಪೀಠ (Dattapeeta) ಭಾಗದಲ್ಲಿ ಭಾರೀ ಗಾಳಿ, (Rain) ಮಳೆಯಾಗುತ್ತಿದೆ. ಚನ್ನಗೋಡನಹಳ್ಳಿ ಸಮೀಪ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಭಾರೀ ಗಾಳಿಗೆ ಮರವೊಂದು ಬುಡಸಮೇತ ಉರುಳಿ ಪ್ರವಾಸಿ ಬೈಕ್ ಮೇಲೆ ಬಿದ್ದಿದೆ. ಮರದ ತುದಿ ಭಾಗ ಮಾತ್ರ ಬೈಕ್‌ಗೆ ತಗುಲಿದ್ದರಿಂದ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಮಿಯ ತೇವಾಂಶ ಇನ್ನೂ ಹೆಚ್ಚಿರುವುದರಿಂದ ಹಲವೆಡೆ ಮಣ್ಣು ಕುಸಿಯುವ ಘಟನೆಗಳು ವರದಿಯಾಗುತ್ತಿವೆ. ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದಲ್ಲೂ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರದಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ತೆರಳುವ ಪ್ರವಾಸಿಗರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಟ್ಯಾಗ್ಗಳು:
ರಾಜ್ಯ