ಹೊಸದಿಲ್ಲಿ, ಆಗಸ್ಟ್ 16 : ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಏರಿಸಿ ಗ್ರಾಹಕರಿಗೆ ಹೊರೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಜನಸಾಮಾನ್ಯರಿಗೆ ಅತ್ಯಾಕರ್ಷಕ ಉಡುಗೊರೆಯನ್ನು ನೀಡಿದೆ. ಹೊಸ ಗ್ರಾಹಕರನ್ನು ಸೆಳೆಯಲು ಕೇವಲ 51 ರೂಪಾಯಿಗೆ ಭರ್ಜರಿ ಆಫರ್ ಅನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. BSNL ನ ಈ ಕೊಡುಗೆ ಖಾಸಾಗಿ ಟೆಲಿಕಾಂ ಕಂಪೆನಿಗಳನ್ನು ನಡುಕ ತರಿಸಿದೆ.
ಸ್ಮಾರ್ಟ್ ಸ್ಟಾರ್ಟ್ ಆಫರ್: ಖಾಸಗಿ ಕಂಪನಿಗಳ ಬೆಲೆ ಏರಿಕೆಯ ಬೆನ್ನಲ್ಲೇ ಬಿಎಸ್‌ಎನ್‌ಎಲ್ ರೂ. 51 ರ 'ಸ್ಮಾರ್ಟ್ ಸ್ಟಾರ್ಟ್' ಫಸ್ಟ್ ರೀಚಾರ್ಜ್ ಕೂಪನ್ ಆಫರ್ ಅನ್ನು ತಂದಿದೆ. ಇದು ಹೊಸ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಪಡೆದುಕೊಳ್ಳುವ ಗ್ರಾಹಕರಿಗೆ ಮಾತ್ರ ಲಭ್ಯವಿರುವ ವಿಶೇಷ ಯೋಜನೆಯಾಗಿದೆ.
ಯೋಜನೆಯ ಪ್ರಮುಖ ಪ್ರಯೋಜನಗಳು: ಈ ಪ್ಲಾನ್ ಅಡಿಯಲ್ಲಿ ಬಳಕೆದಾರರಿಗೆ ಯಾವುದೇ ನೆಟ್‌ವರ್ಕ್‌ಗೆ ಮಿತಿಯಿಲ್ಲದೆ ಮಾತನಾಡಲು ಅನಿಯಮಿತ ವಾಯ್ಸ್ ಕರೆ ಸೌಲಭ್ಯ ಸಿಗಲಿದೆ. ಇದರೊಂದಿಗೆ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಲಭ್ಯವಿರುವುದರಿಂದ ಇಂಟರ್ನೆಟ್ ಬಳಕೆದಾರರಿಗೆ ಇದು ಅತ್ಯಂತ ಅನುಕೂಲಕರವಾಗಿದೆ.
ಪಡೆಯುವುದು ಹೇಗೆ?: ಹೊಸದಾಗಿ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಖರೀದಿಸುವ ಗ್ರಾಹಕರು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ ರೀಚಾರ್ಜ್ ಮಳಿಗೆಗಳಲ್ಲಿ 51 ರೂಪಾಯಿಯ ಮೊದಲ ರೀಚಾರ್ಜ್ ಮಾಡಿಸುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.