Belthngady ಬೈಕ್ ಮತ್ತು ಸರಕಾರಿ ಬಸ್ ಮಧ್ಯೆ ಭೀಕರ ಅಪಘಾತ, ಸವಾರ ಮೃತ್ಯು, ಸಹಸವಾರ ಗಂಭೀರ
ಸುದ್ದಿವಾಣಿ
8/11/2026 11:41:00 AM
ಬೆಳ್ತಂಗಡಿ, ಆಗಸ್ಟ್ 11 : ಬೈಕ್ ಮತ್ತು ಸರಕಾರಿ ಬಸ್ ಮಧ್ಯೆ ಭೀಕರ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ನೀರಚಿಲುಮೆ ಬಳಿ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಪಾರೆಂಕಿ ಪಂಗಳ ನಿವಾಸಿ ಬಾಬು ಕುಲಾಲ್ ಪುತ್ರ ಸನತ್ (30) ಎಂದು ಗುರುತಿಸಲಾಗಿದೆ. ಸಹಸವಾರ ಭರತ್ ಬಳ್ಳಮಂಜ ಗಂಭೀರವಾಗಿ ಗಾಯಗೊಂಡಿದ್ದು, ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಚಿಲುಮೆ ಬಸ್ ನಿಲ್ದಾಣದ ಬಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದಾಗಿ ಕೆಲ ಹೊತ್ತು ಧರ್ಮಸ್ಥಳ ಉಜಿರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಟ್ಯಾಗ್ಗಳು:
ದಕ್ಷಿಣ ಕನ್ನಡ