BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Belthangady ಬೆಳ್ತಂಗಡಿ ಬಿಜೆಪಿ ಮಹಿಳಾಮೋರ್ಚಾ ವತಿಯಿಂದ ಆಟಿಡ್ ಒಂಜಿ ವಿಶೇಷ ತಿನಸ್ ಕಾರ್ಯಕ್ರಮ


ಬೆಳ್ತಂಗಡಿ, ಆಗಸ್ಟ್ 12 :  ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್ ಅನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ವಸಂತಿ ಮಚ್ಚಿನ ಇವರು ಜಿಲ್ಲಾ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಲಕಿತ ಶೆಟ್ಟಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಹಾಗೂ ಬೆಳ್ತಂಗಡಿ ಮಂಡಲದ ಪ್ರಭಾರಿಯಾದ ಶ್ರೀಮತಿ ಕಮಲಾಕ್ಷಿ ಇವರು ಹಾಗೂ ಮಹಿಳಾಮೋರ್ಚಾದ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ಇವರು ಹಾಗೂ ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪೂರ್ಣಿಮಾ ಜಯಂತ್ ಹಾಗೂ ಶ್ರೀಮತಿ ತುಳಸಿ ಉಮೇಶ್ ಹಾಗೂ ಮಹಿಳಾ ಮೋರ್ಚ ಪದಾಧಿಕಾರಿಗಳು ಸದಸ್ಯರು ಹಾಗೂ ಅನನ್ಯ ಜವಾಬ್ದಾರಿಯುತ ಸದಸ್ಯರು ಭಾಗವಹಿಸಿದರು.

 ಆಟಿ ತಿಂಗಳಿನಲ್ಲಿ ಮಾಡುವಂತಹ 25 ಬಗೆಯ ವಿಶೇಷ ತಿನಿಸುಗಳನ್ನು ಪ್ರತಿಯೊಬ್ಬರ ಮನೆಯಿಂದ ತಂದು ಎಲ್ಲರೂ ಹಂಚಿಕೊಂಡು ತಿಂದು ಆಟಿತಿಂಗಳಿನ ಹಿಂದಿನ ವಿಶೇಷತೆಯ ಬಗ್ಗೆ ಹಾಗೂ ಮುಂದಿನ ಪೀಳಿಗೆಯು ಇದನ್ನು ನೆನಪಿಟ್ಟುಕೊಳ್ಳುವಂತೆ ತಾಯಂದಿರು ತಮ್ಮ ಮಕ್ಕಳಿಗೆ ಮನದಟ್ಟು ಮಾಡಬೇಕೆಂದು ಹಿರಿಯರಾದ ಕಮಲಾಕ್ಷಿ ಇವರು ಹೇಳಿದರು.

 ಶ್ರೀಮತಿ ತುಳಸಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಮತಿ ಶಾರದಾ ಇವರು ಸ್ವಾಗತಿಸಿ ಮಂಜುಳಾ ನಡ ಇವರು ಧನ್ಯವಾದವನ್ನಿತ್ತರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!