ಬೆಳ್ತಂಗಡಿ, ಆಗಸ್ಟ್ 29 : ನೆರಿಯ ಗ್ರಾ.ಪಂ. ಸದಸ್ಯೆ ಮರಿಯಮ್ಮ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನೆರಿಯ ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ ಸದಸ್ಯೆ ಮರಿಯಮ್ಮ ಅವರು, ಇಂದು ಶಾಸಕರಾದ ಹರೀಶ್ ಪೂಂಜಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಯಶವಂತ್, ಮಂಡಲ ಕೋಶಾಧಿಕಾರಿ ಜಯಂತ್ ಗೌಡ ಗುರಿಪಳ್ಳ, ನೆರಿಯ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ಪ್ರಮುಖ ಮುಖಂಡರಾದ ಬಾಬು ಗೌಡ ಉಪಸ್ಥಿತರಿದ್ದರು.