BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Belthangady ಸಂಪೂರ್ಣ ಹದಗೆಟ್ಟ ಬೆಳ್ತಂಗಡಿಯ ಕರಂಬಾರು ಬಂತಡ್ಕದ ರಸ್ತೆಗೆ ಮುಕ್ತಿ ಯಾವಾಗ..?


ಬೆಳ್ತಂಗಡಿ, ಆಗಸ್ಟ್ 08 : ಬೆಳ್ತಂಗಡಿ ತಾಲೂಕಿನ ಶಿರ್ಲಾಲ್  ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕದ ರಸ್ತೆಯು ತೀರ ಸಂಪೂರ್ಣ  ಹದಗೆಟ್ಟಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು ಹಾಗೂ ಸ್ಥಳೀಯನಿವಾಸಿಗಳು ರಸ್ತೆಯ ಕೆಸರಿನಲ್ಲಿ ಹೊರಳಾಡಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಗೆ ಹಲವು ಬಾರಿ ಗ್ರಾಮ ಪಂಚಾಯತಿಗೆ ಹಾಗೂ ಜನಪತಿನಿಧಿಗಳಿಗೆ ಮನವಿಯನ್ನು ನೀಡಿದರೂ, ಯಾವುದೇ ಸ್ಪಂದನೆ ನೀಡದಿರುವುದು ಸ್ಥಳಿಯ ಜನರಿಗೆ ಆಕ್ರೋಶಕ್ಕೆ ಕಾರಣವಾಗಿದೆ.  ಈ ಭಾಗದಲ್ಲಿ ಸರಿ ಸುಮಾರು ನೂರಕ್ಕೂ ಅಧಿಕ ಮನೆಗಳಿವೆ ಇನ್ನಾದರೂ ಈ ರಸ್ತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೊಳ್ಳಿಸಲು  ಸ್ಥಳೀಯರು  ಆಗ್ರಹಿಸುತ್ತಿದ್ದಾರೆ.

 ಕೊನೆಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ  ಇತ್ತೀಚಿನ ಭಾರಿ ಮಳೆಯಿಂದ ಉಂಟಾದ ಬಂತಡ್ಕದ  ರಸ್ತೆ ಹಾನಿಯನ್ನು ಪರಿಶೀಲಿಸಿದರು.  ಬಂತಡ್ಕದ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಸ್ಥಳೀಯರು ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕರ್ನಾಡಿಸ್ ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ, ಸಾಫಿ, ನವೀನ್  ಗೌಡ,ಆನಂದ, ಅಸೈನರ್, ಇಸಾಕ್, ಗಣೇಶ್, ಲಕ್ಷ್ಮಿ ಹಾಗೂ ಗ್ರಾಮ ಪಂಚಾಯತ್, ಶಿರ್ಲಾಲ್ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಎಂ ಕೆ, ಅಲ್ ಉಮ್ಮ ಹೆಲ್ಪ್ ಲೈನ್ ನ  ಸದಸ್ಯರಾದ ಸಿದ್ದೀಕ್  ಬಂತಡ್ಕ, ಮೊಹಮ್ಮದ್, ಪುತ್ತು ಮೋನು ಅಶ್ರಫ್, ಅಝೀಮ್, ಉಮೇಶ್, ದಿನೇಶ್ ಬಂತಡ್ಕ ಇವರು ಉಪಸ್ಥಿತರಿದ್ದರು.  ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ರಕ್ಷಿತ್ ಶಿವರಾಂ ವಿಪರೀತ ಮಳೆಯಿಂದ ಹಾನಿಗೊಳಲಾದ  ಬಂತಡ್ಕ ಪ್ರದೇಶಕ್ಕೆ ಅಗತ್ಯ ನೆರವು  ತಲುಪಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೊನೆಗೂ ಬಂತಡ್ಕದ  ರಸ್ತೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!