BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Belthangady ಬೆಳ್ತಂಗಡಿಯ ಮೊಗ್ರು ಗ್ರಾಮ ಮುಗೇರಡ್ಕ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ -75 ರ ರಸ್ತೆ ಸಮಸ್ಯೆಗಳಿಗೆ ಹೆದ್ದಾರಿ ಅಧಿಕಾರಿಗಳ ಸ್ಪಂದನೆ


ಬೆಳ್ತಂಗಡಿ, ಆಗಸ್ಟ್ 14 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಮುಗೇರಡ್ಕ ಎಂಬಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ -75 ರ ರಸ್ತೆಗೆ ಸಂಪರ್ಕ ಕುರಿತಾದ ಗೊಂದಲಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತೀಶ್ರೀ ಹಾಡಲು ಮುಂದಾಗಿದೆ. 

ಈ ನಿಟ್ಟಿನಲ್ಲಿ  ಹೆದ್ದಾರಿ ವಿಭಾಗದ ಮುಖ್ಯ ಇಂಜಿನೀಯರ್  ಪ್ರಸನ್ನ ದರ್ಬೆ ಇತರ ಅಧಿಕಾರಿಗಳೊಂದಿಗೆ  ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ  ಸೂಕ್ತ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.  ಕಳೆದ ಕೆಲ ದಿನಳ ಹಿಂದೆಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಈ ಸಮಸ್ಯೆಯನ್ನು ಲೋಕಸಭಾ ಸದಸ್ಯರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸದರು ಹಾಗೂ ಶಾಸಕರು ತಕ್ಷಣ ಸ್ಟ್ರಕ್ಚರಲ್ ಇಂಜನಿಯರ್ ಪ್ರಸನ್ನ ದರ್ಬೆಯವರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ಘಟಕದ ಯೋಜನಾ ನಿರ್ದೇಶಕರಾದ ಅಬ್ದುಲ್ ಜಾವೇದ್ ಅಜ್ಮಿಯವರ ಜೊತೆ ಚರ್ಚಿಸಲು ಕಳುಹಿಸಿದ್ದರು. ಅ. 13 ರಂದು ಅವರ ಕಚೇರಿಯಲ್ಲಿ  ಕಾರಣಿಕದ ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನ ಭಕ್ತರಿಗೆ ಅನುಕೂಲವಾಗುವ ಹಾಗೂ ಬಹು ನೀರಿಕ್ಷಿತ ಪ್ರವಾಸೋದ್ಯಮ ದೃಷ್ಟಿಯಿಂದ NH ರಸ್ತೆ ಬದಿಯ ಜಾಗ ಕಾಯ್ದಿದಿರಿಸುವ  ಮತ್ತು ಅಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಸಂಪರ್ಕಿಸುವ ರಸ್ತೆಯ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕಣಿಯೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಬಂದಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ,ಬಂದಾರು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಪುತ್ತೂರು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅದೇಶ್ ಶೆಟ್ಟಿ ಉಪ್ಪಿನಂಗಡಿ ,ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು,ಗ್ರೋಮಾ ಕನ್ಸ್ಟ್ರಕ್ಷನ್ ಅಧಿಕಾರಿಗಳಾದ ಜಯರಾಮ್,ಮೋಹನ್,ಇಂಜಿನಿಯರ್ ಗಳು ಉಪಸ್ಥಿತರಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!