Bajpe Leopard ಮನೆಯ ಅಂಗಳಕ್ಕೆ ನುಗ್ಗಿ ಶ್ವಾನವನ್ನು ಹೊತ್ತೊಯ್ದ ಚಿರತೆ, ಸಾರ್ವಜನಿಕರಲ್ಲಿ ಆತಂಕ..!
ಸುದ್ದಿವಾಣಿ
8/10/2026 06:50:00 PM
ಮಂಗಳೂರು, ಆಗಸ್ಟ್ 10 : ಮನೆಯ ಅಂಗಳಕ್ಕೆ ನುಗ್ಗಿ ಚಿರತೆಯೊಂದು ಅಲ್ಲೇ ಮಲಗಿದ್ದ ಶ್ವಾನವನ್ನು ಹೊತ್ತೊಯ್ದ ಘಟನೆ ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ದಿವಂಗತ ಜಿ ಕೆ ನೋಣಯ್ಯ ಪೂಜಾರಿ ಅವರ ಮನೆಯ ಅಂಗಳಕ್ಕೆ ಚಿರತೆ ಏಕಾಏಕಿ ನುಗ್ಗಿ ಮನೆ ಎದುರು ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿಅದನ್ನು ಬಾಯಿಯಲ್ಲಿ ಹಿಡಿದುಕೊಂಡು ಪರಾರಿಯಾಗಿದೆ. ಚಿರತೆ ಶ್ವಾನವನ್ನು ಹೊತ್ತೊಯ್ಯುತ್ತಿರುವ ಸಂಪೂರ್ಣ ದೃಶ್ಯ ಮನೆಯ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾತ್ರಿ ವೇಳೆ ನಡೆದ ಈ ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾಡನಲ್ಲಿ ಒಡಾಡುತ್ತಿದ್ದ ಚಿರತೆಗಳು ಮನೆಯ ಅಂಗಳದವರೆಗೂ ಬಂದಿರುವುದು ಜನರಲ್ಲಿ ಭಯಕ್ಕೆ ಕಾರಣವಾಗಿದ್ದು, ಪರಿಸರದಲ್ಲಿ ಮತ್ತಷ್ಟು ಚಿರತೆಗಳ ಸಂಚಾರವಿದೆಯೇ ಎಂಬ ಬಗ್ಗೆಯೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಜನರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟ್ಯಾಗ್ಗಳು:
ದಕ್ಷಿಣ ಕನ್ನಡ