BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

A young girl of Indian origin tragically died after falling from a flat in Dubai ದುಬೈ : ಫ್ಲ್ಯಾಟ್‌ನಿಂದ ಬಿದ್ದು ಭಾರತೀಯ ಮೂಲದ ಪುಟ್ಟ ಬಾಲಕಿ ದಾರುಣ ಅಂತ್ಯ..!


ದುಬೈ , ಆಗಸ್ಟ್ 26 : ಅಪಾರ್ಟ್‌ಮೆಂಟ್ ನ ಮಹಡಿಯಿಂದ ಬಿದ್ದು 7 ವರ್ಷದ ಕೇರಳ ಮೂಲದ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ದುಬೈ ಶಾರ್ಜಾದ ಅಲ್ ನಬ್ಬಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.  ಸಫಾ ಮುಬಾರಕ್ ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ.   ಅಜ್ಮಾನ್‌ನ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಫಾ, ಕೇರಳ ಮೂಲದ ದಂಪತಿಯ ಏಕೈಕ ಪುತ್ರಿಯಾಗಿದ್ದಳು. 

 ದುರ್ಘಟನೆ ವೇಳೆ ಸಫಾ ಫ್ಲ್ಯಾಟ್‌ನಲ್ಲಿ ಒಂಟಿಯಾಗಿದ್ದಳು ಎನ್ನಲಾಗಿದೆ. ಶಾರ್ಜಾದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ ಮುರ್ಷಿದಾ ಮುಬಾರಕ್ ಕೆಲಸಕ್ಕೆ ತೆರಳಿದ್ದರು. ತಂದೆ ಮುಬಾರಕ್ ಅಲಿ ಕೂಡ ಫ್ಲ್ಯಾಟ್‌ನಿಂದ ಕೆಳಗೆ ಬಂದು ಕಾರಿನತ್ತ ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಲಗಿದ್ದ ಸಫಾ ಎಚ್ಚರಗೊಂಡ ಬಳಿಕ ಕಿಟಕಿಯ ಸ್ಲೈಡಿಂಗ್ ಬಾಗಿಲು ತೆರೆಯಲು ಮುಂದಾದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಪುತ್ರಿಯಯನ್ನು ಕಳಕೊಂಡ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.  

ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕುಟುಂಬ ಕೆಲವು ದಿನಗಳ ಹಿಂದೆ ಕೇರಳಕ್ಕೆ ತೆರಳಿ, ಬಳಿಕ ಶಾರ್ಜಾಕ್ಕೆ ಹಿಂದಿರುಗಿತ್ತು. ಮುಂದಿನ ವಾರ ಶಾಲೆ ಪುನರಾರಂಭವಾಗಲಿದ್ದು, ಸಫಾ ಮತ್ತೆ ಶಾಲೆಗೆ ತೆರಳುವ ನಿರೀಕ್ಷೆಯಲ್ಲಿದ್ದಳು. ಸಫಾ ಅವರ ಅಂತ್ಯಕ್ರಿಯೆಯನ್ನು ಯುಎಇಯಲ್ಲೇ ನಡೆಸಲು ಕುಟುಂಬ ನಿರ್ಧರಿಸಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!