BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ದ.ಕ. ಜಿಲ್ಲೆಯ 9 ಕಡೆ ತಹಸೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ದಾಳಿ,ಮಹತ್ವದ ದಾಖಲೆ ಬೆಂಗಳೂರಿಗೆ ಸಲ್ಲಿಕೆ..!


ಮಂಗಳೂರು, ಆಗಸ್ಟ್ 13 : ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳ ತಹಸೀಲ್ದಾರ್ ಕಚೇರಿಗಳಿಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯ ನಾನಾ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಲೋಕಾಯುಕ್ತರ ಸೂಚನೆ ಯಂತೆ ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕು ತಹಸೀಲ್ದಾರ್ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮಾಹಿತಿ, ದಾಖಲೆಗಳು ರವಾನೆ: ದಾಳಿ ವೇಳೆ ತಹಸೀಲ್ದಾ‌ ಕಚೇರಿಯಲ್ಲಿ ಕೆಲವೊಂದು ದಾಖಲೆಗಳು ಲಭಿಸಿದ್ದು, ಅದನ್ನು ಬೆಂಗಳೂರು ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದು ಲೋಕಾಯುಕ್ತ ಎಸ್ಪಿ ತಿಳಿಸಿದ್ದಾರೆ.

ಮೂಡುಬಿದಿರೆ ತಾಲೂಕು ಕಚೇರಿ: ಮೂಡುಬಿದಿರೆ ತಾಲೂಕು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಮೂಡು ಬಿದಿರೆ ತಾಲೂಕು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಕಚೇರಿಯ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗಿರುವ ಮೂಲಸೌಕರಗಳ ಕುರಿತು ಪರಿಶೀಲನೆ ನಡೆಸಿತು. ಸಾರ್ವಜನಿಕರಿಗೆ ನೀಡಲಾಗುತ್ತಿರುವ ಮೂಲಸೌಕರ್ಯಗಳು, ಶೌಚಾಲಯ, ಸ್ವಚ್ಛ "ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದರು. ಕಚೇರಿಯಲ್ಲಿದ್ದ ಹಿರಿಯ ಅಧಿಕಾರಿ ಗಳಿಂದ ನಾನಾ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ತಾಲೂಕು ಕಚೇರಿಯಲ್ಲಿರುವ ಸಿಬ್ಬಂದಿ ಕೊರತೆ ಬಗ್ಗೆಯೂ ಅಧಿ ಕಾರಿಗಳು, ಮಾಹಿತಿ ಸಂಗ್ರಹಿಸಿದರು. ಕಚೇರಿಯ ದಿನಚರಿ ಪುಸ್ತಕ ಹಾಗೂ ಕೆಲವು ಕಡತಗಳನ್ನು ಪರಿಶೀಲಿಸಿದ ತಂಡ, ಕಚೇರಿಯ ಕಾರ ನಿರ್ವಹಣೆಗೆ ಸಂಬಂಧಿಸಿದ ವಿವರಗಳನ್ನು ಪಡೆದುಕೊಂಡಿತು. ಸ್ಥಳ ದಲ್ಲಿದ್ದ ಸಾರ್ವಜನಿಕರಿಂದ ಕಚೇರಿಯಲ್ಲಿ ದೊರೆಯುತ್ತಿರುವ ಸೇವೆ, ಮೂಲಸೌಕರ ಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಯಿತು. ಸರಕಾರಿ ಕಚೇರಿಗಳಲ್ಲಿ ಇರಬೇಕಾದ 15 ಅಂಶಗಳ ಮೂಲ ಸೌಕರ ಗಳ ಪೈಕಿ ಎಷ್ಟು ಅನುಷ್ಠಾನಗೊಂಡಿವೆ ಹಾಗೂ ಯಾವೆಲ್ಲ ಅಂಶಗಳಲ್ಲಿ ಕೊರತೆ ಇದೆ ಎಂಬುದರ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಕುರಿತು ಕಚೇರಿ ಸಿಬ್ಬಂದಿಯಿಂದ ಅಗತ್ಯ ವಿವರ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

https://youtube.com/shorts/a-XL--GUqg4?feature=share

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!