BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

ಹಾಸನ, ಆಗಸ್ಟ್ 18 : ; ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಣ


ಹಾಸನ, ಆಗಸ್ಟ್ 18 : ಹಾಸನ ಮತ್ತು ಹೊಳೆನರಸೀಪುರ ನಿಲ್ದಾಣದ ಯಾರ್ಡ್’ಗಳಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿಗಳ ಸಲುವಾಗಿ, ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ, ಭಾಗಶಃ ರದ್ದುಗೊಳಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ:

I. ರೈಲುಗಳ ಸಂಚಾರ ರದ್ದು:

1. ದಿನಾಂಕ 19.08.2026 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ.


2. ದಿನಾಂಕ 25.08.2026 ಮತ್ತು 01.09.2026 ರಂದು ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ.


II. ರೈಲುಗಳ ಸಂಚಾರ ಭಾಗಶಃ ರದ್ದು:


1. ದಿನಾಂಕ 19.08.2026 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್’ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳ್ಳಲಿದೆ.


2. ದಿನಾಂಕ 25.08.2026 ಮತ್ತು 01.09.2026 ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್’ಪ್ರೆಸ್ ರೈಲು ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ.


III. ರೈಲು ಸಂಚಾರ ನಿಯಂತ್ರಣ:


1. ದಿನಾಂಕ 19.08.2026 ರಂದು ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!