ಮಂಗಳೂರು, ಆಗಸ್ಟ್ 12: ಮಂಗಳೂರು ನಗರದಲ್ಲಿ ಪೊಲೀಸರು ಎರಡು ಪ್ರತ್ಯೇಕ ಕಳ್ಳತನ ಹಾಗೂ ಕುಖ್ಯಾತ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಸರಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರದಲ್ಲಿ ಹೆಡೆಮುರಿ ಕಟ್ಟಲಾಗಿದ್ದು, ಮತ್ತೊಂದೆಡೆ ದೇವಸ್ಥಾನದ ಕಾಣಿಕೆ ಹುಂಡಿ ಕದ್ದ ಖದೀಮನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಜೂನ್ 14ರಂದು ಸೂಟರ್‌ಪೇಟೆಯ ಗ್ರಾಮ ಲೆಕ್ಕಿಗರ
ಕಚೇರಿ ಬಳಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಸಿದು ಬೈಕ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಈ
ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 26ರಂದು ಪಾಂಡೇಶ್ವರ ಪೊಲೀಸರು ಮೂವರನ್ನು ಬಂಧಿಸಿ ಠಾಣೆಗೆ ಕರೆತರುತ್ತಿದ್ದಾಗ, ಬಾಗಲಕೋಟೆ ಮೂಲದ ಪ್ರಮುಖ ಆರೋಪಿ ಅಲ್ತಾಫ್
ಹುಸೇನ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವಶದಿಂದ ತಪ್ಪಿಸಿಕೊಂಡಿದ್ದನು.
ಎರಡನೇ ಪ್ರಕರಣದಲ್ಲಿ, ಸುರತ್ಕಲ್‌ನ ಮಧ್ಯ ಕೊಡಿಪಾಡಿಯಲ್ಲಿರುವ ಕೋರ್ದಗಬ್ಬು
ದೈವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 5ರಂದು
ರಾತ್ರಿ ಕಬ್ಬಿಣದ ಆಯುಧದಿಂದ ದೇವಸ್ಥಾನದ ಬಾಗಿಲು ಮತ್ತು ಕಿಟಕಿ ಒಡೆದು ಒಳನುಗ್ಗಿದ್ದ ಕಳ್ಳರು, ಸುಮಾರು 15,000 ರೂಪಾಯಿ ನಗದು ಇದ್ದ ಕಾಣಿಕೆ ಪೆಟ್ಟಿಗೆಯನ್ನು
ದೋಚಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆಗಸ್ಟ್ 10ರಂದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಉಡುಪಿ ಮೂಲದ ಸುಖೇಶ್ ನಾಯ್ಕ್ (40) ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಈತನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 18 ಪ್ರಕರಣಗಳು ಹಾಗೂ ಹಲವು ವಾರೆಂಟ್‌ಗಳು ಬಾಕಿ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.