BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Underage Driving ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿ ಅಪಘಾತ, ಬೈಕ್ ಮಾಲೀಕನಿಗೆ ಜೈಲು ಶಿಕ್ಷೆ ಜೊತೆ ಬಾಲಕನಿಗೆ ಲೈಸೆನ್ಸ್ ನಿಷೇಧಿಸಿ ತೀರ್ಪು ನೀಡಿದ ಬೆಳ್ತಂಗಡಿ ಕೋರ್ಟ್..!


ಬೆಳ್ತಂಗಡಿ, ಜುಲೈ 29 : ಅಪ್ರಾಪ್ತ ಬಾಲಕನ ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆಯಿಂದ ಅಪಘಾತವಾಗಿ ಒಂದು ಜೀವ ಹಾನಿಯಾಗಿದ್ದು, ಬೈಕ್ ಮಾಲೀಕನಿಗೆ ಶಿಕ್ಷೆ ಜೊತೆ ಬಾಲಕನಿಗೆ ಲೈಸೆನ್ಸ್ ನಿಷೇಧಿಸಿ ಬೆಳ್ತಂಗಡಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.  ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರು ಹಾಗೂ ಪೋಷಕತ್ವ ವಹಿಸುವವರಿಗೆ ಈ ತೀರ್ಪು ಕಠಿಣ ಎಚ್ಚರಿಕೆಯ ಸಂದೇಶವಾಗಿದೆ. 


ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಳ್ತಂಗಡಿಯ ಹಿರಿಯ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮನು ಬಿ.ಕೆ. ಅವರು, ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಬೈಕ್‌ನ ಮಾಲೀಕ, ತಣ್ಣೀರುಪಂತ ನಿವಾಸಿ ಅಬ್ದುಲ್ ಹಕೀಮ್ ಅವರನ್ನು ದೋಷಿ ಎಂದು ತೀರ್ಮಾನಿಸಿದರು.

ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದ ಆತನ ಸಹೋದರ ಹಾಗೂ ಬೈಕ್ ಮಾಲೀಕ ಅಬ್ದುಲ್ ಹಕೀಮ್ ಅವರಿಗೆ ನ್ಯಾಯಾಲಯವು ₹35,000 ದಂಡ ಹಾಗೂ 1 ದಿನದ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಅಪಘಾತ ಎಸಗಿದ ಅಪ್ರಾಪ್ತ ಬಾಲಕನಿಗೆ 25 ವರ್ಷ ವಯಸ್ಸಾಗುವವರೆಗೆ ಡ್ರೈವಿಂಗ್ ಲೈಸನ್ಸ್ ನೀಡದಂತೆ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲದೆ, ಅಪಘಾತಕ್ಕೀಡಾದ ಬೈಕ್‌ನ RC  ಯನ್ನು ಒಂದು ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ.

2024ರ ಜುಲೈ 20ರಂದು ರಾತ್ರಿ ಸುಮಾರು 7.30ರ ವೇಳೆಗೆ ಅಪ್ರಾಪ್ತ ಬಾಲಕನೊಬ್ಬ ‘ಯಮಹಾ ಎಫ್.ಝಡ್’ ಬೈಕ್‌ನಲ್ಲಿ (KA 21 EE 3296) ಕಕ್ಯಪದವು-ಕಲ್ಲೇರಿ ಸಾರ್ವಜನಿಕ ರಸ್ತೆಯಲ್ಲಿ ಮೂರುಗೋಳಿ ಕಡೆಯಿಂದ ಕಲ್ಲೇರಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿ,ಮಗು ಸೇರಿ ಐವರು ಗಾಯ..!

ಕರಾಯ ಗ್ರಾಮದ ತುರ್ಕಳಿಕೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಶಿವಾನಂದ ಎಂಬವರ ಸ್ಕೂಟರ್‌ಗೆ (KA 19 W 7247) ಬೈಕ್ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಸ್ಕೂಟರ್ ಸವಾರ ಶಿವಾನಂದ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು.ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ. ಅವರು ಪೂರ್ಣಪ್ರಮಾಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.

ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರು ಹಾಗೂ ಪೋಷಕತ್ವ ವಹಿಸುವವರಿಗೆ ಈ ತೀರ್ಪು ಬಲಿಷ್ಠ ಎಚ್ಚರಿಕೆಯ ಸಂದೇಶ ನೀಡಿದೆ.


ಕಚೇರಿ ಮಹಿಳಾ ಸಿಬ್ಬಂದಿ ಹಿಂದೆ ಬಿದ್ದ ಸರ್ಕಾರಿ ಅಧಿಕಾರಿ ಚಳಿ ಬಿಡಿಸಿದ ಮಂಗಳೂರಿನ ಗ್ರೀನ್​ ಗ್ಯಾಂಗ್..!!

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!