BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ಉಡುಪಿ

Udupi ಮದುವೆಯಾಗುವುದಾಗಿ ಆಮಿಷ, ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಅಸ್ಸಾಂ ಮೂಲದ ಮೂವರ ಮೇಲೆ ಪೋಕ್ಸೋ

ಉಡುಪಿ, ಜುಲೈ 08 : ಮದುವೆಯಾಗುವುದಾಗಿ  ಆಮಿಷ ಒಡ್ಡಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆಯನ್ನು ಗರ್ಭವತಿ ಮಾಡಿದ  ಮೂವರ ಮೇಲೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ.


ಪ್ರಕರಣದ ವಿವರ:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಉಡುಪಿಗೆ ಈ ಅಪ್ರಾಪ್ತೆ  ಕೆಲಸಕ್ಕೆಂದು ಬಂದಿದ್ದಳು. ಈ ಸಂದರ್ಭ ಆಕೆಯನ್ನು ಫುಸಲಾಯಿಸಿ ಮದುವೆಯ ಭರವಸೆ ನೀಡಿ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಗರ್ಭವತಿಯಾಗುವಂತೆ ಮಾಡಲಾಗಿತ್ತು.ಕಳೆದ ಡಿಸೆಂಬ‌ರ್ ತಿಂಗಳಿನಿಂದ ಒಬ್ಬರಾದ ಬಳಿಕ ಒಬ್ಬರು ದುರ್ಬಳಕೆಮಾಡಕೊಂಡಿದ್ದರು ಎನ್ನಲಾಗಿದೆ.  ಈ  ಪ್ರಕರಣ ಸಂಬಂಧಿಸಿ ಅಸ್ಸಾಂ ಮೂಲದ ಕುಶಾಲ್, ರಾಜೇಶ್ ಹಾಗೂ ಕೌಶಲ್  ಎಂಬ ಮೂವರು ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ಬಾಲಕಿ ಸದ್ಯ 7 ತಿಂಗಳ ಗರ್ಭಿಣಿಯಾಗಿದ್ದು, ಆಪ್ತರ ಸಹಾಯದೊಂದಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ಮಹಿಳಾ ಠಾಣಾ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!