BREAKING
ಉಡುಪಿ

Udupi ಯುವ ಪತ್ರಕರ್ತ ನಾಗೇಶ್ ಗಾಣಿಗ ಸಿದ್ದಾಪುರ ಹೃದಯಾಘಾತದಿಂದ ಮೃತ್ಯು


ಉಡುಪಿ, ಜುಲೈ16 : ಕುಂದಾಪುರದ ಯುವ ಪತ್ರಕರ್ತ ನಾಗೆಶ್ ಗಾಣಿಗ (42) ಸಿದ್ದಾಪುರ ಹಠತ್ ಸಂಭವಿಸಿದ್ದ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮೃತರು ತಾಯಿ, 5 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರನನ್ನುಅಗಲಿದ್ದಾರೆ.  

 ಕುಂದಾಪುರ ತಾಲೂಕಿನ ಕರ್ಕುಂಜೆ ಹಿಲ್ಕೋಡು ನಿವಾಸಿಯಾಗಿರುವ ನಾಗೆಶ್ ಅವರು ಕಳೆದ 10 ವರ್ಷಗಳಿಂದ ಸಿದ್ದಾಪುರ ಭಾಗದ ವಿಜಯ ಕರ್ನಾಟಕ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಶ್ರಮಜೀವಿಯಾಗಿದ್ದರು. ಕೃಷಿ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ದೈಹಿಕವಾಗಿಯೂ ಸದೃಢವಾಗಿದ್ದರು.

ಬುಧವಾರ ಬೆಳಗ್ಗೆ ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ‌ ಭಾಗವಹಿಸಿದ್ದ ನಾಗೇಶ್ ಗಾಣಿಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತ್ಮೀಯರಿಗೆ ಸಿಕ್ಕಿ ಮನೆಗೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಯಲ್ಲಿ ಊಟ ಸೇವಿಸಿದ್ದು, ಈ ವೇಳೆ ಮನೆಯಲ್ಲಿ ಇರುವಾಗಲೇ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಬಗ್ಗೆ ಚಿಕಿತ್ಸೆಗಾಗಿ ಸಹೋದರಿಯ ಪತಿ (ಬಾವ) ಯ ಜತೆಗೆ ಬೈಕ್‌ನಲ್ಲಿ ನೇರಳಕಟ್ಟೆ ಕ್ಲಿನಿಕ್‌ಗೆ ತೆರಳಿದ್ದಾರೆ. ವೈದ್ಯರು ಪರೀಕ್ಷಿಸಿ ನಡೆಸಿದ್ದು, ಹೃದಯ ಬಡಿತ ಏರಿಳಿತದ ಬಗ್ಗೆ ತಿಳಿಸಿದ್ದಾರೆ. ತುರ್ತು ಚಿಕಿತ್ಸೆಗೆ ಮಣಿಪಾಲಕ್ಕೆ ತೆರಳುವಂತೆ ಸೂಚಿಸಿದ್ದಾರೆ. ನೇರಳಕಟ್ಟೆಯಲ್ಲೇ ಕೆಲಕಾಲ ಪ್ರಾಥಮಿಕ ಚಿಕಿತ್ಸೆಯನ್ನು‌ ನೀಡಲಾಗಿತ್ತು. ಆಸ್ಪತ್ರೆಯಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ನೇರಳಕಟ್ಟೆಯಿಂದ ಆಂಬುಲೆನ್ಸ್‌‌ನಲ್ಲಿ ಕುಂದಾಪುರಕ್ಕೆ ಕಳುಹಿಸಿದ್ದಾರೆ. ಕುಂದಾಪುರ ಬರುವಾಗಲೇ ನಾಗೇಶ್ ಗಾಣಿಗರ ಹೃದಯ ಬಡಿತ ಕಡಿಮೆಯಾಗಿತ್ತು. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕುಂದಾಪುರ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿ ಇದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.

 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!