BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಕಾಲೇಜು ಆವರಣದಲ್ಲೇ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸೋಗಲಾಟ,ವಿಡಿಯೋ ವೈರಲ್, ವ್ಯಾಪಕ ಆಕ್ರೋಶ


ಮಂಗಳೂರು, ಜುಲೈ 14 : ಮಂಗಳೂರು ಹೊರವಲಯದ ಹಳೆಯಂಗಡಿ ಸರ್ಕಾರಿ ಕಾಲೇಜಿನ  ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸೋಗಲಾಟ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ತಮ್ಮ ಸಮವಸ್ತ್ರವನ್ನು ಹರಿದು ಚೂರುಚೂರು ಮಾಡಿರುವುದು, ಸಮವಸ್ತ್ರದ ಮೇಲೆ ಮಾರ್ಕರ್‌ನಿಂದ ಸಹಿ ಹಾಕಿರುವುದು ಹಾಗೂ ಪರಸ್ಪರರ ಸಮವಸ್ತ್ರದ ಮೇಲೂ ಸಹಿ ಹಾಕಿ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಮೇಲೆ ಮಾರ್ಕರ್ ನಿಂದ ಬರೆದು ನಂತರ ಒಬ್ಬೊಬ್ಬರ ಶರ್ಟ್ ಅನ್ನು ಮತ್ತೊಬ್ಬರು ಹರಿದು ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದಾರೆ.  ಈ ಬಗ್ಗೆ ಕಾಲೇಜು ಆಡಳಿತ ಹಾಗೂ ಸಂಬಂಧಪಟ್ಟ ಶಿಕ್ಷಕರು ಸೂಕ್ತ ಕ್ರಮ ಕೈಗೊಂಡು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಈ ವರ್ತನೆಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಅನೇಕ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಕೂಡಲೇ ಈ ಸಂಬಂಧ ಕ್ಷಮಾಪಣೆ ಕೇಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಸಮವಸ್ತ್ರವು ಕೇವಲ ಒಂದು ಬಟ್ಟೆಯಲ್ಲ ಅದು ನಮ್ಮ ಶಾಲೆ-ಕಾಲೇಜಿನ ಶಿಸ್ತು, ಗೌರವ ಮತ್ತು ಗುರುತಿನ ಪ್ರತೀಕ. ಅದನ್ನು ಈ ರೀತಿ ಅವಮಾನಿಸುವುದು ಶಿಕ್ಷಣ ಸಂಸ್ಥೆಯ ಘನತೆಗೆ ಧಕ್ಕೆ ತರುವ ಕೃತ್ಯ. ಹಿರಿಯ ವಿದ್ಯಾರ್ಥಿಗಳು ಹೀಗೆ ವರ್ತಿಸಿದರೆ, ಕಿರಿಯ ವಿದ್ಯಾರ್ಥಿಗಳು ಅದನ್ನೇ ಅನುಸರಿಸುವ ಸಾಧ್ಯತೆ ಇದೆ. ಇಂತಹ ಜವಾಬ್ದಾರಿಯಿಲ್ಲದ ನಡೆಗೆ ಕಾರಣರಾದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

. .


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!