BREAKING
ಉಡುಪಿ

Udupi Traffic Violation Notice ಮೆಸೇಜ್‌ ಕಾರ್ಕಳದ ವ್ಯಕ್ತಿಗೆ ಆರು ಲಕ್ಷ ರೂಪಾಯಿ ಪಂಗನಾಮ


ಉಡುಪಿ,ಜುಲೈ15: ತಮ್ಮ ವಾಟ್ಸಾಪ್‌ಗೆ ಬಂದ ಅನಾಮಧೇಯ ಸಂದೇಶದ ಹಿಂದೆ ಹೋಗಿದ್ದ ವ್ಯಕ್ತಿಯೋರ್ವ ಬರೋಬ್ಬರಿ 6 ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಜು. 5ರಂದು ಮಧ್ಯಾಹ್ನ ರತ್ನಾಕರ ಎಂಬವರ ವಾಟ್ಸಾಪ್‌ಗೆ ಪರಿವಾಹನ್ ಎಂಬ ಖಾತೆಯಿಂದ ಸಂಚಾರ ನಿಯಮ ಉಲ್ಲಂಘನೆ(Traffic Violation Notice) ಬಗ್ಗೆ ಮೆಸೇಜ್ ಬಂದಿತ್ತು.ಅದರ ಜೊತೆಗೆ mparivahan.apk ಎಂಬ ಫೈಲ್ ಕೂಡ ಬಂದಿತ್ತು. ಎಪಿಕೆ ಫೈಲನ್ನು ರತ್ನಾಕರ್ ಅವರ ಮಗ ಡೌಗ್ಲೋಡ್ ಮಾಡಿದ್ದು, ಅದೇ ದಿನ ರಾತ್ರಿ ಮೊಬೈಲ್‌ಗೆ ಯಾರೋ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ ಖಾತೆಯಲ್ಲಿರುವ ಹಣ ಹಾಗೂ ಗೂಗಲ್ ಪಿನ್ ನಂಬರನ್ನು ಹೇಳಿ ಪಿನ್ ನಂಬರನ್ನು ಕೂಡಲೇ ಬದಲಾಯಿಸಿ ಇಲ್ಲದಿದ್ದರೆ ನಿಮ್ಮಖಾತೆಯಲ್ಲಿರುವ ಹಣ ಡೆಬಿಟ್ ಆಗುತ್ತದೆ ಎಂದು ಹೇಳಿದ್ದಾರೆ. ಜು. 8ರಂದು ರತ್ನಾಕರ್ ಅವರು ಬ್ಯಾಂಕಿಗೆ ಹೋಗಿ ಖಾತೆಯನ್ನು ಆನ್‌ಬ್ಲಾಕ್ ಮಾಡಿದ್ದಾರೆ. ಜು.12ರಂದು ರಾತ್ರಿ ಅವರ ಖಾತೆಯಿಂದ ಹಣ ಡೆಬಿಟ್ ಆದ ಬಗ್ಗೆ ಮೆಸೇಜ್ ಬಂದಿರುತ್ತದೆ. ಈ ವೇಳೆ ಒಟ್ಟು 6,01,901.41 ರೂ. ಹಣ ಖಾತೆಯಿಂದ ಹೋಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ತಕ್ಷಣವೇ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಮರುದಿನ ಬ್ಯಾಂಕಿಗೆ ತೆರಳಿ ಖಾತೆ ಪರಿಶೀಲಿಸಿದಾಗ 6,83,599.63 ರೂ. ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ವ್ಯಕ್ತಿಯೋರ್ವರು ಸುಮಾರು 6 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ.

ಜು. 5ರಂದು ಮಧ್ಯಾಹ್ನ ರತ್ನಾಕರ ಅಮೀನ್ ಎಂಬವರ ವಾಟ್ಸಾಪ್‌ಗೆ ಪರಿವಾಹನ್ ಎಂಬ ಖಾತೆಯಿಂದ Taffic Violation Notice ಬಗ್ಗೆ ಮೆಸೇಜ್ ಹಾಗೂ mParivahan.apk ಎಂಬ ಪೈಲ್ ಬಂದಿರುತ್ತದೆ. ಎಪಿಕೆ ಪೈಲ್‌ನ್ನು ರತ್ನಾಕರ್ ಅವರ ಮಗ ಡೌಗ್ಲೋಡ್ ಮಾಡಿದ್ದು, ಅದೇ ದಿನ ರಾತ್ರಿ ಮೊಬೈಲ್‌ಗೆ ಯಾರೋ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿ ಖಾತೆಯಲ್ಲಿರುವ ಹಣ ಹಾಗೂ ಗೂಗಲ್ ಪಿನ್ ನಂಬರನ್ನು ಹೇಳಿ ಪಿನ್ ನಂಬರನ್ನು ಕೂಡಲೇ ಬದಲಾಯಿಸಿ ಇಲ್ಲದಿದ್ದರೆ ನಿಮ್ಮಖಾತೆಯಲ್ಲಿರುವ ಹಣ ಡೆಬಿಟ್ ಆಗುತ್ತದೆ ಎಂದು ಹೇಳಿದ್ದಾರೆ. ಜು. 8ರಂದು ರತ್ನಾಕರ್ ಅವರು ಬ್ಯಾಂಕಿಗೆ ಹೋಗಿ ಖಾತೆಯನ್ನು ಆನ್‌ಬ್ಲಾಕ್ ಮಾಡಿದ್ದಾರೆ. ಜು.12ರಂದು ರಾತ್ರಿ ಅವರ ಖಾತೆಯಿಂದ ಹಣ ಡೆಬಿಟ್ ಆದ ಬಗ್ಗೆ ಮೆಸೇಜ್ ಬಂದಿರುತ್ತದೆ. ಈ ವೇಳೆ ಒಟ್ಟು 6,01,901.41 ರೂ. ಹಣ ಖಾತೆಯಿಂದ ಹೋಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ತಕ್ಷಣವೇ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಮರುದಿನ ಬ್ಯಾಂಕಿಗೆ ತೆರಳಿ ಖಾತೆ ಪರಿಶೀಲಿಸಿದಾಗ 6,83,599.63 ರೂ. ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!