ಸುಳ್ಯ, ಜುಲೈ24 : ಸುಳ್ಯ ಮಂಡಲದ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಸುಳ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆಯಿತು.ಕಾರ್ಯಕ್ರಮವನ್ನು ಮಂಡಲದ ಅಧ್ಕಕ್ಷರಾದ ವೆಂಕಟ ವಳಲಂಬೆ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಉಧ್ಘಾಟಿಸಿದರು. ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಪ್ರಸ್ತಾವನೆಯನ್ನು ಮಾಡಿದರು. ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಕಾನೂನು ಪ್ರಕೋಷ್ಠದ ಮಹತ್ವವನ್ನು ವಿವರಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಮಂಡಲದ ಪ್ರಕೋಷ್ಠದ ಸಂಚಾಲಕರಾದ ಮಹೇಶ್ ಸವಣೂರು ಮುಂದಿನ ಕಾರ್ಯ ಯೋಜನೆಯ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ಸಮಿತಿಯ ಸದಸ್ಯರಾಗಿ ಹರೀಶ್ ಬೂಡುಪನ್ನೆ, ಹರೀಶ್ ಕುಮಾರ್ ಎಂ ಬೂಡಿಯಾರ್, ವಿನೋದ್ ಕುಮಾರ್ ನೆಲ್ಯಾಡಿ, ಹರ್ಷಿತ್ ಕಾರ್ಜ ಮತ್ತು ಕುಮಾರಿ ಶೈಲಿ ಯವರನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ ಮತ್ತು ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಮೇದಪ್ಪ, ಜಿಲ್ಲಾ ಲೀಗಲ್ ಸೆಲ್ ಸದಸ್ಯರಾದ ವೇಣು ಕುಮಾರ್ ಮತ್ತು ಸಂದೀಪ್ ವಳಲಂಬೆ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ್ ಕಂದಡ್ಕ ಮತ್ತು ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.
ಮಂಡಲದ ಸಹ ಸಂಚಾಲಕರಾದ ಸಂದೀಪ್ ಮದುವೆ ಗದ್ದೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಂಡಲದ ಸದಸ್ಯರಾದ ಹರ್ಷಿತ್ ಧನ್ಯವಾದ ಸಲ್ಲಿಸಿದರು.
.jpeg)
