ಮ್ಯಾಡ್ರಿಡ್ (ಸ್ಪೇನ್) : ಸುಡು ಬಿಸಿಲಿನ ಅಘಾತದಿಂದ ಸ್ಪೇನ್ ದೇಶ ಕಂಗೆಟ್ಟಿದ್ದುತಾಪಮಾನ ಹೆಚ್ಚಳದಿಂದ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಅಲ್ಲಿನ ಆರೋಗ್ಯ ಸಂಸ್ಥೆ ಈ ಮಾಹಿತಿ ನೀಡಿದ್ದು 1,028 ಮಂದಿ ಮೃತಪಟ್ಟಿದ್ದಾರೆ ಎಂದು ಎಂದು ಹೇಳಿದೆ. ಕಳೆದ 2025ರಲ್ಲಿ ತಾಪಮಾನ ಹೆಚ್ಚಳದಿಂದ 407 ಮಂದಿ ಮೃತಪಟ್ಟಿದ್ದು, ಈ ವರ್ಷ ಈ ಸಾವಿ ಸಂಖ್ಯೆ ದ್ವಿಗುಣಗೊಂಡಿದ್ದು ಜನತೆ ಆತಂಕದಲ್ಲಿದ್ದಾರೆ.
ಸ್ಪೇನ್‌ನ ಇತಿಹಾಸದಲ್ಲೇ ಈ ವರ್ಷದ ಜೂನ್ ನಲ್ಲಿ ಅತ್ಯಂತ ಹೆಚ್ಚು 41 ಡಿಗ್ರಿ ತಾಪಮಾನ ದಾಖಲಿಸಿದೆ. ಇನ್ನು ಪೋರ್ಚುಗಲ್‌ನ ಹಲವೆಡೆ ತಾಪಮಾನ 44 ಡಿಗ್ರಿ ದಾಟಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಆಸ್ಟ್ರಿಯಾದಲ್ಲಿ ಈ ವರ್ಷ ಅತಿ ದೀರ್ಘಕಾಲದ ಜೂನ್ ಬಿಸಿಗಾಳಿ ದಾಖಲಾಗಿದೆ. ಈ ಹಿಂದೆ 10-14 ದಿನಗಳಿರುತ್ತಿದ್ದ ಬಿಸಿಗಾಳಿ ಈ ವರ್ಷ 30 ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು ಜನತೆ ತತ್ತರಿಸಿ ಹೋಗಿದೆ.
ಜೂನ್ ಕೊನೆಯ ಭಾಗದಿಂದ ಯುರೋಪ್ ಅನ್ನು ದಹಿಸಿದ ಬಿಸಿಗಾಳಿಯು ಯುರೋಪಿನಲ್ಲಿ ಇದುವರೆಗೆ ದಾಖಲಾದ ಅತ್ಯಂತ ತೀವ್ರವಾದ ಬಿಸಿಗಾಳಿಯಾಗಿದೆ. ಹವಾಮಾನ ಬದಲಾವಣೆಯಿಲ್ಲದೆ ಜೂನ್ ತಿಂಗಳಿನಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದು "ಬಹುತೇಕ ಅಸಾಧ್ಯ" ಎಂದು ವರ್ಲ್ಡ್ ವೆದರ್ ಆಟ್ರಿಬ್ಯೂಷನ್ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ. ಜರ್ಮನಿ, ಪೋಲೆಂಡ್, ಜೆಕ್ ಗಣರಾಜ್ಯ, ಸ್ಲೋವಾಕಿಯಾ ಮತ್ತು ಹಂಗೇರಿ ದೇಶಗಳಲ್ಲೂ ಸಾರ್ವಕಾಲಿಕ ತಾಪಮಾನದ ದಾಖಲೆಗಳು ಮುರಿದಿವೆ. ಹಾಗೆಯೇ ಯುಕೆ (UK) ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಜೂನ್ ತಿಂಗಳಿನ ಸಾರ್ವಕಾಲಿಕ ದಾಖಲೆಯ ತಾಪಮಾನ ವರದಿಯಾಗಿದೆ.
ಹೆಚ್ಚು ತಂಪಾದ ವಾತಾವರಣವಿರುವ ಯುರೋಪ್ ದೇಶಗಳಲ್ಲಿ ಎಸಿ ಬಳಕೆಯ ನಿಯಮಗಳೂ ಸಾಕಷ್ಟು ಕಠಿಣವಾಗಿದ್ದು ಸರಾಸರಿ 5 ಮನೆಗಳಲ್ಲಿ 1 ಮನೆಯಲ್ಲಷ್ಟೇ ಹವಾ ನಿಯಂತ್ರಕ(ಎಸಿ)ಗಳನ್ನು ಅಳವಡಿಸಲಾಗಿದೆ ಎಂದು ವರದಿ ಹೇಳಿದೆ.