ಪ್ಯಾರಿಸ್, ಜುಲೈ 12 : ಅಂತಾರಾಷ್ಟ್ರೀಯ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾರತದ ಕರಕುಶಲತೆಯ ಚಿನ್ನದ ಲುಕ್ ನಲ್ಲಿ ಇಶಾ ಅಂಬಾನಿ ಮಿಂಚಿದ್ದಾರೆ. ಇದಕ್ಕಾಗಿ ಮುಂಬಯಿನಲ್ಲಿ 700 ಗಂಟೆಗಳಿಗೂ ಹೆಚ್ಚು ಅವಧಿಯಲ್ಲಿ ಅತ್ಯಂತ ಸೂಕ್ಷ್ಮಕಸೂತಿ ಮಾಡಿರುವ ಚಿನ್ನದ ವಿಶೇಷ ಗೌನ್ ಅನ್ನು ಇಶಾ ಅಂಬಾನಿ ಧರಿಸಿದ್ದರು.
ರಿಲಯನ್ಸ್ ರಿಟೇಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ಪ್ರತಿಷ್ಠಿತ ಪ್ಯಾರಿಸ್ ಹಾಟ್ ಕೌಚರ್ ನಲ್ಲಿ ನಡೆದ ಮನೀಶ್ ಮಲ್ಹೋತ್ರಾ ಮತ್ತು ರಾಹುಲ್ ಮಿಶ್ರಾ ಅವರ ಅದ್ಭುತ ವಿನ್ಯಾಸ ಪ್ರಸ್ತುತಿಗಳಲ್ಲಿ ಇಶಾ ಅಂಬಾನಿ ವಿಶೇಷವಾಗಿ ಭಾಗವಹಿಸಿದ್ದರು. ಅವರ ಉಪಸ್ಥಿತಿಯನ್ನು ಅಂತಾರಾಷ್ಟ್ರೀಯ ಫ್ಯಾಷನ್ ವೇದಿಕೆಯಲ್ಲಿ ಭಾರತೀಯ ವಿನ್ಯಾಸಕರು ಮತ್ತು ಕುಶಲಕರ್ಮಿಗಳನ್ನು ಉತ್ತೇಜಿಸುವ ಅವರ ವಿಶಾಲ ದೃಷ್ಟಿಕೋನವನ್ನು ಸೂಚಿಸಿದೆ. ಈ ಮೂಲಕ ಅವರು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾರತೀಯ ಫ್ಯಾಷನ್‌ನ ಪ್ರಮುಖ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ.
ಇಶಾ ಅವರು ಮನೀಶ್ ಮಲ್ಹೋತ್ರಾ ಅವರ ಆಟಮ್/ವಿಂಟರ್ ಕಲೆಕ್ಷನ್ 2026 ಹಾಟ್ ಕೌಚರ್ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಇದು ಅಧಿಕೃತ ಪ್ಯಾರಿಸ್ ಕೌಚರ್ ಕ್ಯಾಲೆಂಡರ್‌ನಲ್ಲಿ ಮಲ್ಹೋತ್ರ ಅವರ ಚೊಚ್ಚಲ ಪ್ರಸ್ತುತಿಯಾಗಿರುವುದು ವಿಶೇಷ. ಇದಕ್ಕಾಗಿ ಮುಂಬಯಿನಲ್ಲಿ 700 ಗಂಟೆಗಳಿಗೂ ಹೆಚ್ಚು ಅವಧಿಯಲ್ಲಿ ಅತ್ಯಂತ ಸೂಕ್ಷ್ಮಕಸೂತಿ ಮಾಡಿರುವ ಚಿನ್ನದ ವಿಶೇಷ ಗೌನ್ ಅನ್ನು ಇಶಾ ಅಂಬಾನಿ ಧರಿಸಿದ್ದರು.
ಮನೀಶ್ ಮಲ್ಹೋತ್ರಾ ಅವರು ಸ್ಟೈಲಿಸ್ಟ್ ಆಂಡ್ರ್ಯೂ ಮುಕಮಲ್ ಅವರ ಸಹಯೋಗದೊಂದಿಗೆ ಈ ಡಿಸೈನರ್ ಗೌನ್ಅನ್ನು ವಿಶೇಷವಾಗಿ ಇಶಾ ಅಂಬಾನಿಗಾಗಿ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ ಭಾರತದ ಸಾಂಪ್ರದಾಯಿಕ 'ಜರಿ-ಜರ್ದೋಸಿ' ಕರಕುಶಲತೆ ಹಾಗೂ 'ಸಾಲಿ' ಮತ್ತು 'ತಾಬನ್' ಎಂಬ ಎರಡು ಬಗೆಯ ಕಸೂತಿ ಕೆಲಸಗಳೊಂದಿಗೆ, ಕೈಯಿಂದ ಅಳವಡಿಸಲಾದ ಸ್ಫಟಿಕಗಳನ್ನು ಬಳಸಲಾಗಿದೆ. 'ಮಾ' (ತಾಯಿ) ಎಂಬ ಪರಿಕಲ್ಪನೆಯಿಂದ ಪ್ರೇರಿತವಾದ ಈ ವಿನ್ಯಾಸವನ್ನು ಅವರು ಪ್ರೀತಿ, ಶಕ್ತಿ ಮತ್ತು ಘನತೆಯ ಮೂಲಕ ಹಲವಾರು ಪೀಳಿಗೆಗಳನ್ನೇ ರೂಪಿಸಿದ ಮಹಿಳೆಯರಿಗೆ ಅರ್ಪಿಸಿದ್ದಾರೆ.ಈ ಚಿನ್ನದ ಗೌನ್ ಗೆ ಪೂರಕವಾಗಿ ಇಶಾ ಅಂಬಾನಿ ಅವರು ಲೋರೆನ್ ಶ್ವಾರ್ಟ್ಜ್ ಅವರ 50 ಕ್ಯಾರೆಟ್ ನ ನ್ಯೂಡ್ ವಜ್ರದ ಕಿವಿಯೋಲೆಗಳು ಮತ್ತು 12 ಕ್ಯಾರೆಟ್ ನ ಪಿಯರ್ ಆಕಾರದ ನ್ಯೂಡ್ ವಜ್ರದ ಉಂಗುರದೊಂದಿಗೆ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿದ್ದರು. ಚಿನ್ನದ ಗೌನ್ ಮತ್ತು ವಜ್ರದ ಆಭರಣಗಳ ಈ ಸಂಯೋಜನೆಯು ಪ್ಯಾರಿಸ್‌ನ ಪ್ರತಿಷ್ಠಿತ ಫ್ಯಾಷನ್ ವೇದಿಕೆಯಲ್ಲಿ ಭಾರತೀಯ ಕರಕುಶಲತೆ ಮತ್ತು ಆಧುನಿಕ ವಿನ್ಯಾಸದ ಮಿಶ್ರಣವನ್ನು ಪ್ರದರ್ಶಿಸಿತು.
ಇಶಾ ಅಂಬಾನಿ ಅವರ ಪ್ಯಾರಿಸ್ ಫ್ಯಾಷನ್ ನಲ್ಲಿನ ಉಪಸ್ಥಿತಿಯನ್ನು ಭಾರತೀಯ ವಿನ್ಯಾಸಕರು, ಐಷಾರಾಮಿ ಬ್ರಾಂಡ್‌ಗಳು ಮತ್ತು ಕುಶಲಕರ್ಮಿಗಳನ್ನು ಪ್ರಮುಖ ಜಾಗತಿಕ ವೇದಿಕೆಗಳಿಗೆ ಕೊಂಡೊಯ್ಯುವ ಅವರ ದೂರದೃಷ್ಟಿಯನ್ನುತೋರಿಸಿದೆ. ರಿಲಯನ್ಸ್ ರಿಟೇಲ್ ನಲ್ಲಿ ಅವರು ಭಾರತೀಯ ವಿನ್ಯಾಸ ಮತ್ತು ಸೃಜನಶೀಲ ಪ್ರತಿಭೆಗೆ ಜಾಗತಿಕ ಮನ್ನಣೆ ಸಿಗುವಂತಾಗಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.