ಮಂಗಳೂರು,ಜುಲೈ17 : MRPL (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿ 915 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ನಿರ್ದೇಶಕರ ಮಂಡಳಿಯ 276ನೇ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶ ಗಳಿಗೆ ಅನುಮೋದನೆ ನೀಡಲಾಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಗೆ 272 ಕೋಟಿ ರೂ. ನಷ್ಟವಾಗಿತ್ತು. ಕಂಪನಿಯ ಕಾರ್ಯಾಚರಣೆಯ ಆದಾಯವು 41,609 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಆದಾಯ 20,989 ಕೋಟಿ ರೂ. ಇತ್ತು ಆದ್ರೆ ಈ ಬಾರಿ ಆದಾಯ ದುಪ್ಪಟ್ಟು ಏರಿಕೆಯಾಗಿದೆ.
ದೇವನಗೊಂಠಿ ಟರ್ಮಿನಲ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ATF(ವಿಮಾನ ಇಂಧನ )ಪೈಪ್‌ಲೈನ್‌ಗಾಗಿ PNRB (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಅನುಮೋದನೆ ನೀಡಿದೆ. ಮಂಗಳೂರಿನ ಏಜಿಸ್ ಟರ್ಮಿನಲ್, ಆಂಧ್ರಪ್ರದೇಶದ ಹಿಂದೂಪುರ ಡಿಪೋ ಮತ್ತು ತಮಿಳುನಾಡಿನ ಎನ್ನೋರ್ ಟರ್ಮಿನಲ್‌ಗಳಲ್ಲಿ ಉತ್ಪನ್ನಗಳ ಲೋಡಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ ನವಿ ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ (JNPA), ಆಂಧ್ರಪ್ರದೇಶದ ಕಾಕಿನಾಡ ಮತ್ತು ಕೃಷ್ಣಪಟ್ಟಣಂನಲ್ಲಿ ಟ್ಯಾಂಕ್‌ಗಳಿಗೆ (ಶೇಖರಣಾ ಟ್ಯಾಂಕ್‌ಗಳು) ಗುತ್ತಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಬಳಸಿದ ಅಡುಗೆ ಎಣ್ಣೆಯನ್ನು ಸಹ-ಸಂಸ್ಕರಣೆ ಮಾಡುವ ಮೂಲಕ ಸುಸ್ಥಿರ ವಿಮಾನ ಇಂಧನ ತಯಾರಿಸುವ ತನ್ನ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.