BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ರಸ್ತೆಬದಿ ಆಹಾರ ಮಳಿಗೆಗಳ ಮೇಲೆ ಮಂಗಳೂರು ಪಾಲಿಕೆ ದಿಢೀರ್ ದಾಳಿ, ಆರೋಗ್ಯಕ್ಕೆ ಹಾನಿಕಾರವಾದ 'ಅಜಿನೋಮೋಟೊ' ವಶ..!


ಮಂಗಳೂರು, ಜುಲೈ 24: ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತ ದೃಷ್ಟಿಯಿಂದ ಮಂಗಳೂರು ಮನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ತಂಡ ನಗರದ ಪ್ರಮುಖ ರರ್ಸ್ತೆಬದಿ ಆಹಾರ ಮಳಿಗೆಗಳ ಮೇಲೆ ದಿಢೀ ದಾಳಿ ನಡೆಸಿ ಆಹಾರ ಭದ್ರತಾ ತಪಾಸಣೆ ಕೈಗೊಂಡಿದೆ.

ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ರಸ್ತೆಬದಿ ತಿಂಡಿ - ತಿನಿಸುಗಳ ಮಳಿಗೆಗಳ ಮೇಲೂ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದೆ. ಈ ಸಂದರ್ಭ ನಿಯಮ ಬಾಹಿರವಾಗಿ ಬಳಸಲಾಗುತ್ತಿದ್ದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾದ 'ಅಜಿನೋಮೋಟೊ' ಪದಾರ್ಥನ್ನ ಪತ್ತೆ ಹಚ್ಚಿ ಜಪ್ತಿ ಮಾಡಿದೆ.
ರಸ್ತೆಬದಿ ಸಿಗುವ ಫಾಸ್ಟ್ ಫುಡ್ ಹಾಗೂ ತಿನಿಸುಗಳಿಗೆ ರುಚಿ ಹೆಚ್ಚಿಸಲು ಕಾನೂನುಬಾಹಿರವಾಗಿ ಮತ್ತು ಅತಿಯಾಗಿ ಅಜಿನೋಮೋಟೊ ರಾಸಾಯನಿಕ ಬಳಸಲಾಗುತ್ತಿತ್ತು. ದಾಳಿ ವೇಳೆ ಅಧಿಕಾರಿಗಳು ಪ್ರತಿಯೊಂದು ಮಳಿಗೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅಲ್ಲಿದ್ದ ಅಜಿನೋಮೋಟೊ ಸಂಗ್ರಹವನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು, ನಿಯಮಗಳನ್ನು ಉಲ್ಲಂಘಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!