BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮನೆ ಕಾಮಗಾರಿಗೆ ಬಂದು ಚಿನ್ನಾಭರಣ ಕಳವು, ಉತ್ತರ ಪ್ರದೇಶ ಮೂಲದ ಆರೋಪಿ ಜಹೀರುದ್ದೀನ್ ಬಂಧನ


ಮಂಗಳೂರು,ಜುಲೈ 22: ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರಿಂದ 6.37 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮೂಲತ: ಉತ್ತರ ಪ್ರದೇಶದ ಬಲರಾಮ್‌ಪುರ್ ಗುಮಾರಿ ನಿವಾಸಿ ಜಹೀರುದ್ದೀನ್ (24) ಬಂಧಿತ ಆರೋಪಿ. ಕಳವಾಗಿರುವ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂದರಿನ ಅಜೀಜುದ್ದೀನ್ ರಸ್ತೆ ನಿವಾಸಿಯಾಗಿರುವ ಜಹೀರುದ್ದೀನ್ ಎಂಬಾತನು ಮೇರಿಹಿಲ್‌ನ ಜಗದೀಶ್‌ ದಾಸ್ ಎಂಬಾತನು ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ನಂತರ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿಯನ್ನು ಮೇಸ್ತ್ರಿ ಹಾಗೂ ಸಹಾಯಕ ಕೆಲಸದಾರರ ಮೂಲಕ 2026 ಜುಲೈ 6ರಂದು ನಡೆಸಿದ್ದನು. ಇದೇ ವೇಳೆ ಮನೆಯ ಟೇಬಲ್ ಡ್ರಾವರ್‌ನಲ್ಲಿ ಇರಿಸಲಾಗಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಉಂಗುರ, 4 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿ ಸುಮಾರು ರೂ 6,37,000 ಬೆಲೆಯ ಸೊತ್ತುಗಳು ಕಳವು ಆಗಿತ್ತು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 68/2026 ಕಲಂ 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡ ಪೊಲೀಸರು ಮನೆ ಕೆಲಸಕ್ಕೆ ಇದ್ದ ಕೆಲಸಗಾರರನ್ನು ಕೂಲಂಕುಷವಾಗಿ ವಿಚಾರಣೆಯನ್ನು ನಡೆಸಿದಾಗ, ಆರೋಪಿ ಜಹೀರುದ್ದೀನ್ ಎಂಬಾತನು ಚಿನ್ನಾಭರಣ ಹಾಗೂ ವಾಚನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಕಳವಾಗಿದ್ದ ಚಿನ್ನಾಭರಣಗಳನ್ನು ಹಾಗೂ ವಾಚನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಡಿ.ಅರ್ ಮಂಜಪ್ಪ, ಪೊಲೀಸ್ ಉಪನಿರೀಕ್ಷಕ ಅರುಣ್ ಕುಮಾರ್.ಡಿ ಹಾಗೂ ಠಾಣೆಯ ಸಿಬ್ಬಂದಿಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!