BREAKING
ದಕ್ಷಿಣ ಕನ್ನಡ

Mangaluru ಹಿರಿಯ ಪತ್ರಕರ್ತ, ಸಾಹಿತಿ ಸಸಿಹಿತ್ಲು ಪರಮಾನಂದ ಸಾಲ್ಯಾನ್ ನಿಧನ


ಮಂಗಳೂರು, ಜುಲೈ13 : ಹಿರಿಯ ಪತ್ರಕರ್ತ, ಸಾಹಿತಿ ನಾಟಕಕಾರ ಪರಮಾನಂದ ಸಾಲ್ಯಾನ್ ಅವರು ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. 

ಸುರತ್ಕಲ್ ಸಸಿಹಿತ್ಲು ಶ್ರೀ ಸಾರಂತಯ ಗರೋಡಿ ಉಳ್ಳಾಲ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಉತ್ತಮ ಸಾಹಿತಿ, ಸಂಘಟಕರೂ ಆಗಿದ್ದ ಪರಾಮಾನಂದ ಸಾಲ್ಯಾನ್ ಹಲವಾರು ನಾಟಕಗಳನ್ನು ಬರೆದು ನಿರ್ದೇಶನ ಕೂಡ ಮಾಡಿದ್ದರು. ಅಜೇಯ ಎಂಬ ಪತ್ರಿಕೆ ಸಂಪಾದಕರಾಗಿದ್ದ ಅವರು ಮುಂಗಾರು, ಹೊಸ ದಿಗಂತ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದ್ದರು. ಇವರ ಸಾಧನೆ ಕಂಡು ಆನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿದ್ದುವು.  ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದು ಇಂದು ಸಂಜೆ ಸಸಿಹಿತ್ಲುವಿನ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂತ್ಯ ಕ್ರೀಯೆ ನಡೆಯಲಿದೆ ಎಂದು ತಿಳಿದುಬಂದಿದೆ.     

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!