BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ರಸ್ತೆ ಗುಂಡಿಗಳಿಗೆ ಬಲಿಯಾದ ಯುವಕ, ಬಜ್ಪೆ ಎಕ್ಕಾರಿನಲ್ಲಿ ಬೈಕ್ ಮತ್ತು ಬಸ್ ಅಪಘಾತದಲ್ಲಿ ಬಷೀರ್ ದಾರುಣ ಅಂತ್ಯ..!


ಮಂಗಳೂರು,ಜುಲೈ 28 : ಬುಲೆಟ್ ಬೈಕ್ ಹಾಗೂ ಖಾಸಾಗಿ ಸರ್ವಿಸ್ ಬಸ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಎಕ್ಕಾರು ಸಮೀಪದ ನಡೆದಿದೆ. ಕಿನ್ನಿಗೋಳಿ ಕಾಪಿಕಾಡ್‌ನ ನಿವಾಸಿ ಮೊಹಮ್ಮದ್ ಬಷೀರ್ (42) ಮೃತ ದುರ್ದೈವಿಯಾಗಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪತ್ನಿ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು ಮಂಗಳೂರು ಆಸಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಸೇವಕರಾಗಿದ್ದ ಬಷೀರ್

ಪ್ರಸ್ತುತ ಬಜಪೆ ಪ್ಲಾಮಾ ರೆಸಿಡೆನ್ಸಿ ಯಲ್ಲಿ ನೆಲೆಸಿದ್ದ ಬಷೀರ್ ಅವರು ಕಳೆದ 10 ವರ್ಷಗಳಿಂದ ಬಜ್ಪೆ ಪರಿಸರದಲ್ಲಿ ಚಿರಪರಿಚಿತ ವ್ಯಕ್ತಿತ್ವ. "ಸಾಮಾಜಿಕ ಸೇವೆ, ಸಮಾಜ ಸೇವೆ" ಎಂಬ ಭಾವನೆಯೊಂದಿಗೆ ಎಲ್ಲರ ಕಷ್ಟ ಸುಖಗಳಿಗೆ ಜೊತೆಯಾಗುತ್ತಿದ್ದರು. ಜಾತಿ, ಮತ ಭೇದವಿಲ್ಲದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಅವರ ವ್ಯಕ್ತಿತ್ವ ಇಡೀ ಪ್ರದೇಶಕ್ಕೆ ಮಾದರಿಯಾಗಿತ್ತು. 

"ಒಂದು ಗುಂಡಿ ತಪ್ಪಿಸಲು ಹೋಗಿ ಇನ್ನೊಂದು ಗುಂಡಿಗೆ..!!

ಸ್ಥಳೀಯರ ಪ್ರಕಾರ, ಕಿನ್ನಿಗೋಳಿಯಿಂದ ಬಜ್ಪೆ, ಮಂಗಳೂರು ಕಡೆಗೆ ಹೋಗುವ ಈ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಡಾಮರು ಕಿತ್ತು ಹೋಗಿ, ದೊಡ್ಡ ದೊಡ್ಡ ಗುಂಡಿಗಳು ರಸ್ತೆಯುದ್ದಕ್ಕೂ ಕಾಣಿಸುತ್ತಿವೆ. ದಿನನಿತ್ಯ ಸಾವಿರಾರು  ವಾಹನಗಳು, ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. "ಒಂದು ಗುಂಡಿ ತಪ್ಪಿಸಲಿಕ್ಕೆ ಹೋಗಿ ಇನ್ನೊಂದು ಗುಂಡಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ಸವಾರರಿಗೆ ಆತಂಕಕಾರಿಯಾಗಿದೆ.

ಮನವಿ ಕೊಟ್ಟರೆ ಭರವಸೆ ಮಾತ್ರ, ಫಲ ಶೂನ್ಯ

ಈ ರಸ್ತೆ ದುರವಸ್ಥೆಯ ಬಗ್ಗೆ ಹಲವು ಬಾರಿ ಸ್ಥಳೀಯ ಪಂಚಾಯತ್ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯ ಜನರು ಆರೋಪಿಸಿದ್ದಾರೆ. ಸ್ಥಳೀಯ ಯುವಕರು ಮತ್ತು ಸಂಘಟನೆಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. "ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ರಸ್ತೆಯನ್ನು ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು  ಹೇಳಿದ್ದಾರೆ.

ಮೀನುಗಾರ ಮುಖಂಡ ಗಂಗಾಧರ ಪಾಂಗಳ ಕೊಲೆ ಪ್ರಕರಣ, ಮೂವರು ಸಹೋದರರು ಸೇರಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ..!

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!