ಮನವಿ ಸ್ವೀಕರಿಸಿ ನಿಯೋಗದೊಂದಿಗೆ ಮಾತನಾಡಿದ ಆಯುಕ್ತರು ಸಮಸ್ಯೆಯ ಗಂಭೀರತೆಯ ಬಗ್ಗೆ ಮಾಹಿತಿ ಪಡೆದು ಸಂಡೆ ಬಜಾರ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಾಳೆ ತಾ30/07/2026 ರಂದು ಸಂಡೆ ಬಜಾರ್ ವ್ಯಾಪಾರಡ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಉಸ್ತುವಾರಿ ಸಚಿವರ ಸೂಚನೆ ನಂತರವೂ ಸಂಡೆ ಬಜಾರ್ ತೆರವು ನಡೆದಿತ್ತು ಮತ್ತು ಪಾಲಿಕೆ ಅಧಿಕಾರಿಗಳು ಹಾಗೂ ಬೀದಿ ವ್ಯಾಪಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು ಈ ಹಿನ್ನೆಲೆಯಲ್ಲಿ ನೂತನ ಆಯುಕ್ತರು ಸ್ಥಳ ಪರಿಶೀಲನೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಬಿ.ಕೆ ಇಮ್ತಿಯಾಜ್ ತಿಳಿಸಿದ್ದಾರೆ .
ನಿಯೋಗದಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ಪ್ರಮುಖರಾದ ಸಂತೋಷ್ ಆರ್.ಎಸ್, ಮುಜಾಫರ್ ಅಹ್ಮದ್, ಎಂ.ಎನ್ ಶಿವಪ್ಪ, ಸಿಕಂದರ್ ಬೇಗ್, ಹಂಝ ಮೊಹಮ್ಮದ್,ಗುಡ್ಡಪ್ಪ,ಶಿವಾನಂದ , ಪಕೀರ ನಾಯ್ಕ್,ಗದಿಗಪ್ಪ,ಮುಂತಾದವರು ಉಪಸ್ಥಿತರಿದ್ದರು.
