ಮಂಗಳೂರು,ಜುಲೈ14: ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿಯರ ವಿರುದ್ದ ಪೊಲೀಸರು ಬೇಟೆ ಮುಂದುವರೆಸಿದ್ದು ಮತ್ತೆ 11 ಮಂದಿ ಬಾಂಗ್ಲಾದೇಶಿಯರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಮಂಗಳೂರು ಪೊಲೀಸರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಮತ್ತು ಕೆಪಿಟಿ ಬಳಿಯ ಎರಡು ವಿಭಿನ್ನ ಕಟ್ಟಡ ನಿರ್ಮಾಣ ಸ್ಥಳಗಳಿಗೆ ದಾಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ್ನು ಪರಿಶೀಲನೆ ಮಾಡಿದಾಗ ಬಾಂಗ್ಲಾದೇಶಿಯರು ಪತ್ತೆಯಾಗಿದ್ದಾರೆ. ನಾಲ್ವರು ಅಪ್ರಾಪ್ತರು ಸೇರಿದಂತೆ 11 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮಂಗಳೂರು ನಗರದಲ್ಲಿ ಬಂಧಿಸಲ್ಪಟ್ಟ ಅಕ್ರಮ ಬಾಂಗ್ಲಾದೇಶಿಯರ ಸಂಖ್ಯೆ 19 ಕ್ಕೇರಿದೆ.
ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮೊಹಮ್ಮದ್ ಇಮ್ರಾನ್ ಅಲಿ(17), ಮೊಹಮ್ಮದ್ ಕೌಸರ್ ಅಲಿ(21), ಮೊಹಮ್ಮದ್ ನೂರ್ ಅಮೀನ್ (34), ಮೊಹಮ್ಮದ್ ನಹಿದುಲ್ ಇಸ್ಲಾಂ (22), ಮೊಹಮ್ಮದ್ ಹುಮಾಯೋನ್ ಕೋಬಿರ್ (22), ಮೊಹಮ್ಮದ್ ರೊಮ್ಜನ್ ಅಲಿ (23), ಮೊಹಮ್ಮದ್ ರೆಹಾದ್ ಅಲಿ (17), ಮೊಹಮ್ಮದ್ ಜಕರಿಯಾ ಅಲಿ (16), ಮೊಹಮ್ಮದ್ ಅಬ್ದುಲ್ ರೆಹಮಾನ್ ರಾಯಲ್ (19), ಮೊಹಮ್ಮದ್ ಇಸ್ರಾಫಿಲ್ ಅಲಿ (15) ಮತ್ತು ಮೊಹಮ್ಮದ್ ನೋಯಾನ್(24) ಬಂಧಿತರಾಗಿದ್ದಾರೆ.
ಬಂಧಿತ ಬಾಂಗ್ಲಾದೇಶಿಯರ ಗಡಿಪಾರಿಗೆ ಸಿದ್ದತೆ
ಕಳೆದ ಜುಲೈ 10 ರಂದು, ಸುರತ್ಕಲ್ ಪೊಲೀಸರು ಸುರತ್ಕಲ್‌ನ ಮುಕ್ಕದಲ್ಲಿರುವ ನಿರ್ಮಾಣ ಸ್ಥಳದಲ್ಲಿ ಎಂಟು ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿಪಾರು ಮಾಡಲು ಅಗತ್ಯ ಕ್ರಮಗಳನ್ನು ನಗರ ಪೊಲೀಸರು ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈ ಕಾರ್ಮಿಕರು, ಸುಮಾರು ಮೂರು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ವಲಯದ ಮೂಲಕ ಪಾಸ್‌ಪೋರ್ಟ್ ಅಥವಾ ವೀಸಾಗಳಿಲ್ಲದೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಬಂಧನದ ನಂತರ ಅವರನ್ನು ಗಡಿಪಾರು ಮಾಡಲು ಮುಂದಿನ ಕಾನೂನು ಕ್ರಮಗಳ ಕುರಿತು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೊತೆಗೆ ಕಾರ್ಮಿಕರ ಅಕ್ರಮ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟವರು ಮತ್ತು ಅವರಿಗೆ ಉದ್ಯೋಗ ವ್ಯವಸ್ಥೆ ಮಾಡಿದವರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.