King Cobra ಬೆಳ್ತಂಗಡಿ ಮನೆಯೊಂದರ ಟೈನಿಂಗ್ ಟೇಬಲ್ ಅಡಿ ಬೃಹತ್ ಕಾಳಿಂಗ..!!
ಸುದ್ದಿವಾಣಿ
7/19/2026 09:27:00 PM
ಬೆಳ್ತಂಗಡಿ, ಜುಲೈ 19 : ಬೃಹತ್ ಕಾಳಿಂಗ ಸರ್ಪವೊಂದು ಮನೆಯೊಂದರ ಡೈನಿಂಗ್ ಹಾಲ್‌ನಲ್ಲಿ ಕಾಣಿಸಿಕೊಂಡ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದಿದೆ. ನಾವೂರು ಗ್ರಾಮದ ನಿವಾಸಿ ವಿಲ್ಫ್ರೇಡ್ ಡಿಸೋಜಾ ಎಂಬವರ ಮನೆಯ ಡೈನಿಂಗ್ ಹಾಲ್ ನ ಟೇಬಲ್ ಅಡಿ ಈ ಬೃಹತ್ ಕಿಂಗ್ ಕೋಬ್ರಾ ಕಾಣಸಿಕ್ಕಿದೆ. ದೈತ್ಯ ಹಾವನ್ನು ಕಂಡ ಮನೆಯವರು ತಕ್ಷಣವೇ ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ ಕರೆ ಮಾಡಿ ತಿಳಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಶೋಕ್ ಅವರು ಸುಮಾರು ಎಂಟು ಅಡಿ ಉದ್ದವಿದ್ದ ಈ ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಬೆಚ್ಚಗಿನ ವಾತಾವರಣವನ್ನು ಹಾವುಗಳು ಅರಸಿ ಬರುವುದರಿಂದ ಜನರು ಎಚ್ಚರದಿಂದ ಇರಬೇಕು ಎಂದು ಉರಗ ತಜ್ಞರು ಮನವಿ ಮಾಡಿದ್ದಾರೆ. .
ಟ್ಯಾಗ್ಗಳು:
ದಕ್ಷಿಣ ಕನ್ನಡ