BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kasaragod ಮಾನಸಿಕ ಒತ್ತಡದಿಂದ 18 ರ ಹರೆಯದ ಯುವತಿ ಜೀವಾಂತ್ಯ

ಕಾಸರಗೋಡು , ಜುಲೈ 07 : ಹದಿಹರೆಯದ ಯುವತಿಯೊಬ್ಬಳು ವಿಷ ಸೇವನೆ ಮಾಡಿ ಜೀವಾಂತ್ಯ ಮಾಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. 



 ಚೆಟ್ಟಂಕುಳಿ ಎಸ್.ಎಂ. ಮಂಝಿಲ್ ನಿವಾಸಿ ಅಬ್ದುಲ್ ಮನಾಫ್ ಅವರ ಪುತ್ರಿ ಅಮೀನಾ ನುಸಾ (18) ಜೀವಾಂತ್ಯ ಮಾಡಿಕೊಂಡ ಯುವತಿಯಾಗಿದ್ದಾಳೆ. 

ಜೂನ್ 25ರಂದು ಇಲಿಗಳಿಗೆ ಇಡುವ ಇಲಿಪಾಶನ ವಿಷ ಸೇವಿಸಿದ ಬಳಿಕ ಅಮೀನಾ ನುಸಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಕೊನೆಯುಸಿರೆಳೆದರು.

ಕುಟುಂಬದವರ ಮಾಹಿತಿಯಂತೆ, ಅಮೀನಾ ನುಸಾ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಿಂದ ಉಂಟಾದ ಮಾನಸಿಕ ಒತ್ತಡವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆಯ ಕುರಿತು ಕಾಸರಗೋಡು ಪೊಲೀಸರು ಬಿಎನ್‌ಎಸ್‌ಎಸ್ ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!