BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Kalaburagi ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ ಪ್ರಕರಣ, ಚಾಲಕ ಸೇರಿ ಮೂವರು ಸಸ್ಪೆಂಡ್

ಕಲಬುರಗಿ,ಜುಲೈ 07 : ಕಲಬುರಗಿ-ಚಿಂಚೋಳಿ ಕಾರ್ಯಾಚರಣೆಯಲ್ಲಿದ ಬಸ್ ಸಂಖ್ಯೆ ಕೆಎ.28 ಎಫ್-1985 ರಾತ್ರಿ ಕೊನೆಯ ಸುತ್ತಿನ ಕಾರ್ಯಾಚರಣೆ ಸಂದರ್ಭದಲ್ಲಿ ಹೆಡ್ ಲೈಟ್ ಮಂದಗತಿ ಇರುವ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಮತೆ ಬಸ್ ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ.



ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ಅವರು ಈ ಮಾಹಿತಿ  ತಿಳಿಸಿದ್ದಾರೆ.

ಕಳೆದ ಜುಲೈ 4 ರಂದು ಚಿಂಚೋಳಿ ಘಟಕದ ಅನುಸೂಚಿ ಸಂಖ್ಯೆ 83 ರಲ್ಲಿ ಚಿಂಚೋಳಿ-ಕಲಬುರಗಿ ಮಾರ್ಗಕ್ಕೆ ನಿಯೋಜನೆ ಆಗಿರುವ ಕೆ.ಎ. 28 ಎಫ್-1985 ಬಸ್ ರಾತ್ರಿ ಕಲಬುರಗಿ-ಚಿಂಚೋಳಿ ಕೊನೆ ಸುತ್ತು ಹೋಗುವಾಗ ಹೆಡ್‍ಲೈಟ್ ಮಂದಗತಿ ಇರುವ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಸಂಚರಿಸಿದ್ದು, ಈ ಕುರಿತ ವಿವಿಧ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

ಈ ಸಂಬಂಧ ಅಧಿಕಾರಿಗಳು ಚಿಂಚೋಳಿ ಘಟಕಕ್ಕೆ ಭೇಟಿ ನೀಡಿ ತಪಾಸಣೆ ವರದಿ ನೀಡಿದ್ದು, ಅದರಂತೆ ಬಸ್ಸಿಗೆ ಸರಿಯಾಗಿ ದುರಸ್ತಿ ಮಾಡದ ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಣೆ ಮಾಡದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ವಾಹನ ದುರಸ್ಥಿ ಮಾಡಿಸಿಕೊಳ್ಳದೇ ಅಜಾಗೂರಕತೆಯಿಂದ ವಾಹನ ಚಲಾಯಿಸಿದ ಚಾಲಕ ಆಕಾಶ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತ್ತುಗೊಳಿಸಲಾಗಿದೆ.

ಇನ್ನು ಈ ರೀತಿಯ ಘಟನೆಗಳು ಮರು ಕಳಿಸದಂತೆ ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಮತ್ತು ಸಿಬ್ಬಂದಿಗಳಿಗೆ ಜಾಗೂರಕತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!