ಕಲಬುರಗಿ, ಜುಲೈ 06 : ಮೊಬೈಲ್ ಟಾರ್ಚ್ ಲೈಟಿನ ಬೆಳಕಿನಲ್ಲಿ KSRTC ಬಸ್ಸನ್ನು ಬರೋಬ್ಬರಿ 84 ಕಿಲೋ ಮೀಟರ್ ಓಡಿಸಿದ ಘಟನೆ ರಾಜ್ಯದ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದರೂ, ಕಂಡಕ್ಟರ್ ತನ್ನ ಮೊಬೈಲ್ ಫೋನ್ ಟಾರ್ಚ್ ಬಳಸಿ ಚಾಲಕನಿಗೆ ದಾರಿ ತೋರಿಸುತ್ತಾ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಕಲಬುರಗಿಯಿಂದ ಚಿಂಚೋಳಿ ಪಟ್ಟಣಕ್ಕೆ ತೆರಳುತ್ತಿದ್ದ ಈ ಬಸ್‌ನಲ್ಲಿ, ದಟ್ಟ ಕತ್ತಲೆಯ ರಸ್ತೆಯಲ್ಲಿ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದುವು. ಆದರೂ ಪ್ರಯಾಣವನ್ನು ನಿಲ್ಲಿಸದೆ, ಕಂಡಕ್ಟರ್ ತೋರಿಸಿದ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ ಚಾಲಕ ಬಸ್ ಚಲಾಯಿಸಿದ್ದಾರೆ. ಈ ಅಪಾಯಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
