BREAKING
ದೇಶ

Jio Finence ಜಿಯೋ ಫೈನಾನ್ಸ್‌ ಆರಂಭಿಸಿದೆ ಕೇವಲ 24 ರೂಪಾಯಿಗಳಿಗೆ ಐಟಿ ರಿಟರ್ನ್‌ ಫೈಲಿಂಗ್‌ ಸೇವೆ


ಮುಂಬಯಿ
, ಜುಲೈ 10, 2026 : ಆದಾಯ ತೆರಿಗೆ ವಿವರ ತೆರಿಗೆ ಸಲ್ಲಿಕೆಯ ಅವಧಿ ಸಮೀಪಿಸುತ್ತಿರುವಂತೆಯೇ, ಜನತೆಯ ಅನುಕೂಲಕ್ಕಾಗಿ ಜಿಯೋ ಫೈನಾನ್ಸ್‌  ತನ್ನ  ಜನಪ್ರಿಯವಾದ ತೆರಿಗೆ ಯೋಜನೆ ಮತ್ತು ಸಲ್ಲಿಕೆ ಮಾದರಿಯ ಸೇವೆಯನ್ನು ಆರಂಭಿಸಿದೆ. ಸೇವೆಗಳು ಕೇವಲ 24 ರುಪಾಯಿಗಳ ಅಗ್ಗದ ಶುಲ್ಕದಲ್ಲಿ ಆರಂಭವಾಗುತ್ತಿರುವುದು ವಿಶೇಷ.  ಸ್ವಯಂ-ಸೇವಾ ಆಯ್ಕೆಗಳಿಗೆ ಕೇವಲ ₹24 ರಿಂದ ಆರಂಭವಾಗುವ ಪ್ಲಾಟ್ಫಾರ್ಮ್, ಭಾರತದ ಲಕ್ಷಾಂತರ ನಾಗರಿಕರಿಗೆ ಯಾವುದೇ ಕಾಗದಪತ್ರಗಳಿಲ್ಲದೆ ಆದಾಯ ತೆರಿಗೆ ಸಲ್ಲಿಕೆ (ಐಟಿಆರ್ ) ಮತ್ತು ಹಣಕಾಸು ವರ್ಷದ ಯೋಜನೆಗಳನ್ನು ಸರಳಗೊಳಿಸಲು ಸಂಪೂರ್ಣ ಡಿಜಿಟಲ್ ಪರಿಹಾರವನ್ನು ಒದಗಿಸುತ್ತದೆ.

ವರ್ಷದ ವಿಶೇಷತೆಯೆಂದರೆ, ಜಿಯೋ ತನ್ನ ರಿವಾರ್ಡ್ ಇಕೋಸಿಸ್ಟಂ ಅನ್ನು ಸೇವೆಗೆ ನೇರವಾಗಿ ಜೋಡಿಸಿದೆ. ತೆರಿಗೆದಾರರು ತಮ್ಮ ಒಟ್ಟು ಸಲ್ಲಿಕೆ ಶುಲ್ಕದ ಮೇಲೆ ಶೇ. 25 ವರೆಗೆ ಜಿಯೋ ಪಾಯಿಂಟ್ಸ್ಗಳ ಪ್ರಯೋಜನಗಳನ್ನು ಪಡೆಯಬಹುದು. ಅಂಕಗಳನ್ನು ಆಪ್ನಲ್ಲಿಯೇ ಜನಪ್ರಿಯ ಬ್ರಾಂಡ್ ವೋಚರ್ಗಳು, ವಿಶೇಷ ಶಾಪಿಂಗ್ ಡೀಲ್ಗಳು ಮತ್ತು ಪಾಲುದಾರರ ಆಫರ್ಗಳಿಗಾಗಿ ಬಳಸಿಕೊಳ್ಳಬಹುದು.

ಸೇವೆಯನ್ನು ನೋಂದಾಯಿತ -ರಿಟರ್ನ್ ಇಂಟರ್ಮೀಡಿಯರಿ  ಆಗಿರುವ ಟ್ಯಾಕ್ಸ್‌ಬಡ್ಡಿ (ಎಸ್ಎಸ್ಬಿಎ ಇನ್ನೊವೇಶನ್ಸ್ಲಿಮಿಟೆಡ್) ಸಹಯೋಗದೊಂದಿಗೆ ನೀಡಲಾಗಿದೆ. ಇದು ಬಿಲ್ಟ್ಇನ್ಕಂಪ್ಲಯನ್ಸ್ಟೂಲ್ಸ್‌, ಟ್ಯಾಕ್ಸ್ಪ್ಲಾನರ್‌,  ವೃತ್ತಿಪರ ಸಲಹೆಗಳ ಸೇವೆಯನ್ನು ಒಳಗೊಂಡಿದೆ. ಬಳಕೆದಾರರು  80 ಸಿ ಮತ್ತು 80 ಡಿ ಅಡಿಯಲ್ಲಿ  ತೆರಿಗೆ ಕಡಿತಗಳನ್ನು ಪಡೆಯಲು ಮತ್ತು ತೆರಿಗೆ ಪದ್ಧತಿಗಳನ್ನು ಮೌಲ್ಯಮಾಪನ ಮಾಡಲು ಸಹಕರಿಸುತ್ತದೆ.

ಬಳಕೆದಾರರ ಎಲ್ಲಾ ಡೇಟಾವನ್ನು ಟ್ಯಾಕ್ಸ್‌ಬಡ್ಡಿಯ  ಎನ್ಕ್ರಿಪ್ಟ್ ಮಾಡಲಾದ ಫ್ರೇಮ್ವರ್ಕ್ನಲ್ಲಿ ಮಾತ್ರ ನಿರ್ವಹಿಸಲಾಗುತ್ತದೆ.  ಜಿಯೋ ಫೈನಾನ್ಸ್ ಡೇಟಾವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವುದಿಲ್ಲ.

ಜಿಯೋ ಫೈನಾನ್ಸ್ ಪ್ಲಾಟ್ಫಾರ್ಮ್ ಮತ್ತು ಸರ್ವಿಸ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರ್ಭೆ ಎಸ್.ಶರ್ಮಾ,“ ಯಾವಾಗಲೂ ಸಂಕೀರ್ಣವಾದ ಆರ್ಥಿಕ ಕಾರ್ಯಗಳನ್ನು ಸರಳಗೊಳಿಸುವುದು ಮತ್ತು ಬಳಕೆದಾರರಿಗೆ ಅವರ ಆರ್ಥಿಕ ಯೋಗಕ್ಷೇಮದ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುವುದೇ ಜಿಯೋ ಫೈನಾನ್ಸ್ಗುರಿಯಾಗಿದೆ. ನಮ್ಮ ಅತ್ಯಂತ ಸುಲಭ ಮತ್ತು ಕೈಗೆಟುಕುವ ತೆರಿಗೆ ಮಾಡ್ಯೂಲ್ನೊಂದಿಗೆ, ನಾವು ಐಟಿಆರ್ (ITR) ಸಲ್ಲಿಕೆಯಲ್ಲಿನ ಸಾಂಪ್ರದಾಯಿಕ ಅಡೆತಡೆಗಳನ್ನು ಮತ್ತು ಹೆಚ್ಚಿನ ವೆಚ್ಚಗಳನ್ನು ಬಗೆಹರಿಸುತ್ತಿದ್ದೇವೆ. ಇದು ಸಂಪೂರ್ಣ ಸುರಕ್ಷಿತವಾಗಿದೆ. ಮತ್ತು ಬಳಕೆದಾರರಿಗೆ ಲಾಭದಾಯವಾಗಿದೆʼʼ ಎಂದು ವಿವರಿಸಿದರು.

ತೆರಿಗೆ ಮಾಡ್ಯೂಲ್ ಸೇವೆಯ ಬಗ್ಗೆ ಮಾತನಾಡುತ್ತಾ, ಟ್ಯಾಕ್ಸ್ಬಡ್ಡಿಯ ಸಹ-ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಶ್ರೀನಿವಾಸ್ ರೆಡ್ಡಿ, "ಜಿಯೋಫೈನಾನ್ಸ್ನೊಂದಿಗಿನ ಪಾಲುದಾರಿಕೆಯು ಸಾಮಾನ್ಯ ಭಾರತೀಯರಿಗೆ ಟ್ಯಾಕ್ಸ್‌ಬಡ್ಡಿಯ ನಿಯಂತ್ರಿತ ಇಆರ್  ಚೌಕಟ್ಟಿನಿಂದ ಚಾಲಿತವಾಗಿ,  ಸುರಕ್ಷಿತವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ." ಎಂದರು.

ಈ ಮಾದರಿಯಲ್ಲಿ 'ಡು-ಇಟ್-ಯುವರ್ಸೆಲ್ಫ್'  ಯೋಜನೆಗಳು ಆದಾಯ ತೆರಿಗೆ ಇಲಾಖೆಯ ಪೋರ್ಟಲ್ನಿಂದ ಸಮಗ್ರ ದತ್ತಾಂಶವನ್ನು ಪಡೆದುಕೊಳ್ಳುವುದರೊಂದಿಗೆ ಐಚ್ಛಿಕ ನೋಟಿಸ್ ನಿರ್ವಹಣೆಯನ್ನು ಒದಗಿಸುತ್ತವೆಯಾದರೂ,  ತಜ್ಞರ ನೆರವಿನ ಆಯ್ಕೆಗಳು, ಉಚಿತ ನೋಟಿಸ್ ನಿರ್ವಹಣೆಯನ್ನು  ಒಳಗೊಂಡಿರುತ್ತವೆ. ಹಾಗೂ ಸಲ್ಲಿಸಿದ ರಿಟರ್ನ್ಗೆ ಸಂಬಂಧಿಸಿ ನಂತರದಲ್ಲಿ ಯಾವುದೇ ಅಧಿಕೃತ ತೆರಿಗೆ ನೋಟಿಸ್ ಬಂದರೆ, ತಂಡವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅದಕ್ಕೆ ಉತ್ತರಿಸುವ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ ಎಂದು ಜಿಯೋ ಫೈನಾನ್ಸ್ತಿಳಿಸಿದೆ.

 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!