ಹುಬ್ಬಳ್ಳಿ, ಜುಲೈ 03 : ರಾಜ್ಯದ ಕೆಲವು ನಿಲ್ದಾಣಗಳಲ್ಲಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಾಗಿದೆ ಈ ಮೊದಲು 30.06.2026 ರವರೆಗೆ ನಿಗದಿಪಡಿಸಲಾಗಿದ್ದ ತಾತ್ಕಾಲಿಕ ನಿಲುಗಡೆಗಳನ್ನು 30.09.2026 ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ರೈಲು ಸಂಖ್ಯೆ 56519/56520 ಕೆಎಸ್ಆರ್ ಬೆಂಗಳೂರು–ಹೊಸಪೇಟೆ–ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ ರೈಲಿನ ದೇವನೂರು (VNR), ಹೊಳಲ್ಕೆರೆ (HLK) ಮತ್ತು ಅಮೃತಾಪುರ (AMC) ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯು 30.09.2026 ರವರೆಗೆ ಮುಂದುವರಿಯುತ್ತದೆ. ಅದೇ ರೀತಿ, ರೈಲು ಸಂಖ್ಯೆ 20675/20676 ಬೆಳಗಾವಿ–ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್’ಪ್ರೆಸ್ ಮತ್ತು ರೈಲು ಸಂಖ್ಯೆ 17391/17392 ಕೆಎಸ್ಆರ್ ಬೆಂಗಳೂರು–ಸಿಂಧನೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲುಗಳ ರಾಮಗಿರಿ (RGI) ನಿಲ್ದಾಣದ ತಾತ್ಕಾಲಿಕ ನಿಲುಗಡೆಯನ್ನು ಸಹ 30.09.2026 ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 16587/16588 ಯಶವಂತಪುರ–ಬಿಕಾನೇರ್–ಯಶವಂತಪುರ ಎಕ್ಸ್’ಪ್ರೆಸ್ ರೈಲಿನ ಬೀರೂರು (RRB) ನಿಲ್ದಾಣದ ತಾತ್ಕಾಲಿಕ ನಿಲುಗಡೆ ಮತ್ತು ರೈಲು ಸಂಖ್ಯೆ 17391/17392 ಕೆಎಸ್ಆರ್ ಬೆಂಗಳೂರು–ಸಿಂಧನೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲಿನ ಚಳಗೇರಿ (CLI) ನಿಲ್ದಾಣದ ತಾತ್ಕಾಲಿಕ ನಿಲುಗಡೆಯು 30.09.2026 ರವರೆಗೆ ಮುಂದುವರಿಯುತ್ತದೆ.
ರೈಲು ಸಂಖ್ಯೆ 20651/20652 ಕೆಎಸ್ಆರ್ ಬೆಂಗಳೂರು–ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲಿನ ಅರಸಾಳು (ARU) ಮತ್ತು ಕುಂಸಿ (KMSI) ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯನ್ನು ಸಹ 30.09.2026 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 16579/16580 ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್’ಪ್ರೆಸ್ ರೈಲು ಚಿಕ್ಕಬಾಣಾವರ (BAW) ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 16239/16240 ಚಿಕ್ಕಮಗಳೂರು–ಯಶವಂತಪುರ–ಚಿಕ್ಕಮಗಳೂರು ಎಕ್ಸ್’ಪ್ರೆಸ್ ರೈಲು ಸಂಪಿಗೆ ರೋಡ್ (SPGR) ನಿಲ್ದಾಣದಲ್ಲಿ 30.09.2026 ರವರೆಗೆ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಿದೆ.
ರೈಲು ಸಂಖ್ಯೆ 16228 ತಾಳಗುಪ್ಪ–ಮೈಸೂರು ಎಕ್ಸ್’ಪ್ರೆಸ್ ರೈಲಿನ ಮಲ್ಲೇಶ್ವರಂ (MWM) ನಿಲ್ದಾಣದ ತಾತ್ಕಾಲಿಕ ನಿಲುಗಡೆ ಮತ್ತು ರೈಲು ಸಂಖ್ಯೆ 16315/16316 ಮೈಸೂರು–ತಿರುವನಂತಪುರಂ ನಾರ್ತ್–ಮೈಸೂರು ಎಕ್ಸ್’ಪ್ರೆಸ್ ರೈಲಿನ ಮದ್ದೂರು (MAD) ನಿಲ್ದಾಣದ ತಾತ್ಕಾಲಿಕ ನಿಲುಗಡೆಯನ್ನು 30.09.2026 ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 66553 ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮೆಮು ರೈಲು ಕೃಷ್ಣದೇವರಾಯ ಹಾಲ್ಟ್ (KNDV) ನಿಲ್ದಾಣದಲ್ಲಿ 30.09.2026 ರವರೆಗೆ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಿದೆ.
ರೈಲು ಸಂಖ್ಯೆ 66519/66520 ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು–ಮಾರಿಕುಪ್ಪಂ ಮೆಮು ಮತ್ತು ರೈಲು ಸಂಖ್ಯೆ 16521 ಬಂಗಾರಪೇಟೆ–ಕೆಎಸ್ಆರ್ ಬೆಂಗಳೂರು ಮೆಮು ರೈಲುಗಳು ದೇವನಗೊಂಥಿ (DKN) ನಿಲ್ದಾಣದಲ್ಲಿ 30.09.2026 ರವರೆಗೆ ತಮ್ಮ ತಾತ್ಕಾಲಿಕ ನಿಲುಗಡೆಗಳನ್ನು ಮುಂದುವರಿಸಲಿವೆ.