BREAKING
ದೇಶ

Gurgaon ಸಹೋದ್ಯೋಗಿನಿಯ ಕೊಂದು ಬಳಿಕ ರೈಲಿಗೆ ತಲೆಕೊಟ್ಟು ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ


ಗುರುಗ್ರಾಮ್, ಜುಲೈ 16 : ತನ್ನ ಮಹಿಳಾ ಸಹೋದ್ಯೋಗಿಯ ಹತ್ಯೆ ಮಾಡಿ ಬಳಿಕ ರೈಲಿಗೆ ತಲೆಕೊಟ್ಟು ಇಂಜಿನೀಯರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಇನ್ಶಾರಾ ಅಯ್ಯೂಬ್ ಹಾಗೂ ಛತ್ತೀಸ್‌ಗಢ ಮೂಲದ ಶ್ರೇಷ್ಠ್ ಮಲ್ಲಿಕ್ ಇಬ್ಬರೂ ಗುರುಗ್ರಾಮ್‌ನ ಪ್ರಮುಖ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ಶಾರಾ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಹಾಗೂ ಮಲ್ಲಿಕ್ ಎನ್‌ಐಟಿ ರಾಯಪುರ ದಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 

ಇದೇ ಜುಲೈ ತಿಂಗಳ 1ರಂದು ಇನ್ಶಾರಾ ತನ್ನ ಪಿಜಿ ವಸತಿ ತೊರೆದು, ಗುರುಗ್ರಾಮ್‌ನ ಸೆಕ್ಟರ್-55ರಲ್ಲಿ ಇರುವ ಮಲ್ಲಿಕ್‌ನ ಫ್ಲಾಟ್‌ಗೆ ವಾಸಕ್ಕೆ ತೆರಳಿದ್ದರು. ವಾಸಕ್ಕೆ ಬಂದ ನಾಲ್ಕನೇ ದಿನವೇ ಇನ್ಶಾರಾ ಶಿರಚ್ಛೇದಗೊಂಡ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದು, ದೇಹದ ಮೇಲೆ ಹಲವು ಚಾಕು ಇರಿತದ ಗಾಯಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಮಲ್ಲಿಕ್‌ನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ, ಫ್ಲಾಟ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಈ ಬಗ್ಗೆ ತನಿಖೆ ಮುಂದುವರೆದಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!