ಗದಗ, ಜುಲೈ24: ಗದಗದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಶವ ಆಕೆ ವಾಸಿಸುತ್ತಿದ್ದ ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳು ಜೀವಾಂತ್ಯ ಮಾಡಿಕೊಂಡಿಲ್ಲ ಹತ್ಯೆ ಮಾಡಲಾಗಿದ್ದು ಈ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿದ್ಯಾರ್ಥಿನಿಯ ಹೆತ್ತವರು ಆಗ್ರಹಿಸಿದ್ದಾರೆ.
ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು ಮೃತ ವಿದ್ಯಾರ್ಥಿನಿಯನ್ನ ಡಾ. ವೀಣಾ ಹಾನಾಪುರ (25) ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದವರಾದ ವೀಣಾ ಅವರು ಹಾಸ್ಟೆಲ್‌ನಲ್ಲಿದ್ದುಕೊಂಡು ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್(MPH) ಕೋರ್ಸ್ ಓದುತ್ತಿದ್ದರು. ನಿನ್ನೆ ರಾತ್ರಿ ಹಾಸ್ಟೆಲ್ ರೂಮ್‌ಗೆ ಹೋಗಿದ್ದ ವೀಣಾ ರಾತ್ರಿ 11 ಗಂಟೆಯಾದರೂ ಆಚೆ ಬಾರದ ಹಿನ್ನೆಲೆ ಅನುಮಾನಗೊಂಡು ವಾರ್ಡ್ ರೂಂ ಬಾಗಿಲು ಬಡಿದ್ದಾರೆ. ಬಾಗಿಲು ತೆರೆಯದ ಹಿನ್ನೆಲೆ ಬಾಗಿಲು ಮುರಿದು ಕೋಣೆಯೊಳಗೆ ಹೋದಾಗ ಮಂಚದ ಕಂಬಿಗೆ ನೇಣು ಬಿಗಿದ ಸ್ಥಿತಿ ವೀಣಾ ಶವ ಪತ್ತೆಯಾಗಿದೆ.
ಇನ್ನು ಮಗಳ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ವೈದ್ಯಳಾಬೇಕಿದ್ದು ಅವಳು ಸಾಯುವವಳಲ್ಲ.ಯಾವುದೆ ಸಮಸ್ಯೆ ಇರಲಿಲ್ಲ. ಕಾಲು ನೆಲಕ್ಕೆ ತಾಗುವಂತೆ ಇದ್ದು ಮಗಳ ಮುಖದ ಮೇಲೆ ಗಾಯಗಳಾಗಿವೆ. ಅಲ್ಲದೆ ನೇಣುಬಿಗಿದ ಬಟ್ಟೆಯೂ ಮಗಳಿಗೆ ಸರಿದ್ದಲ್ಲ. ಮಗಳ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು ಅದು ಮಗಳ ಹಸ್ತಾಕ್ಷರವಲ್ಲ ಎಂದು ಪೋಷಕರು ಸ್ಪಷ್ಟಪಡಿಸಿದ್ದು ಮಗಳು ಜೀವಾಂತ್ಯ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ. ಮಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿದ್ಯಾರ್ಥಿನಿಯ ತಂದೆ ರಾಮಪ್ಪ ಹಾನಾಪೂರ್ ಆಗ್ರಹಿಸಿದ್ದಾರೆ.ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ಜಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
