BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ವಿದೇಶ

China ಮೇಸಾಕ್ ಚಂಡಮಾರುತಕ್ಕೆ ನಲುಗಿದ ಚೀನಾದಲ್ಲಿ ಸಮರೋಪದಿಯಲ್ಲಿ ಪರಿಹಾರ ಕಾರ್ಯ, ಸಾಕಣೆ ಕೇಂದ್ರದಿಂದ 900 ಹಾವುಗಳು ಪರಾರಿ..!

 ಬೀಜಿಂಗ್, ಜುಲೈ 08: ಮೇಸಾಕ್ ಚಂಡಮಾರುತದ ಬಳಿಕ ಸಂಭವಿಸಿದ ಭೀಕರ ಪ್ರವಾಹದಿಂದ ತತ್ತರಿಸಿದ ಚೀನಾದಲ್ಲಿ ಪರಿಹಾರ ಕಾರ್ಯಗಳು ಸಮರೋಪದಿಯಲ್ಲಿ ನಡೆಯುತ್ತಿವೆ.ಈ ಮಧ್ಯೆ ಸುಮಾರು 900 ಹಾವುಗಳು ನೀರಿನಲ್ಲಿ ಕೊಚ್ಚಿಹೋಗಿ ತಪ್ಪಿಸಿಕೊಂಡಿದ್ದು, ಭಾರಿ ಆತಂಕವನ್ನು ಸೃಷ್ಟಿಸಿದೆ.


ಈಗಾಲೇ 20 ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರೆ 331 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮಧ್ಯೆ ದಕ್ಷಿಣ ಚೀನಾದಲ್ಲಿ ಪ್ರವಾಹದ ಅಬ್ಬರಕ್ಕೆ ಹಾವಿನ ಸಾಕಣೆ ಕೇಂದ್ರವೊಂದು ಕುಸಿದು ಬಿದ್ದಿದ್ದರಿಂದ, ಸುಮಾರು 900 ಹಾವುಗಳು ನೀರಿನಲ್ಲಿ ಕೊಚ್ಚಿಹೋಗಿ ತಪ್ಪಿಸಿಕೊಂಡಿದ್ದು, ಭಾರಿ ಆತಂಕವನ್ನು ಸೃಷ್ಟಿಸಿದೆ.

ಪ್ರವಾಹ ತುರ್ತು ರಕ್ಷಣೆ, ವಿಪತ್ತು ಪರಿಹಾರ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸರ್ವಸನ್ನದ್ಧ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಧ್ಯಕ್ಷ ಷಿ ಜಿನ್‌ಪಿಂಗ್ ಮಂಗಳವಾರ ಕರೆ ನೀಡಿದ್ದಾರೆ .


1,30,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 11 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಅಲ್ಲದೆ, ಮಳೆಯು ಸುಮಾರು 13,000 ಎಕರೆ ಕೃಷಿ ಭೂಮಿಯನ್ನು ಹಾನಿಗೊಳಿಸಿದೆ.

ಗುವಾಂಗ್ಕ್ಸಿಯಲ್ಲಿ 40 ನದಿಗಳು ಮತ್ತು ಜಲಮೂಲಗಳು ಉಕ್ಕಿ ಹರಿಯುತ್ತಿವೆ.


ಪ್ರವಾಹ ಪೀಡಿತ ಗುವಾಂಗ್ಕ್ಸಿ ಪಟ್ಟಣದಲ್ಲಿ ಮೊಣಕಾಲಿನಷ್ಟು ನೀರಿನಲ್ಲಿ ನಿಂತು ಗ್ರಾಮಸ್ಥರು ಈಜುತ್ತಿರುವ ಹಾವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ,
ಹುಬೈನಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಕ್ಸಿನ್ಹುವಾ ತಿಳಿಸಿದ್ದು, 4,800 ಮನೆಗಳು ಹಾನಿಗೊಳಗಾಗಿವೆ ಮತ್ತು 22 ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ ಎಂದು ವರದಿ ಮಾಡಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!